ಪ್ರಸಕ್ತ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಚೆಲ್ಯಡ್ಕ ಸೇತುವೆ ಮುಳುಗಡೆ

ಹೊಸದಿಗಂತ ವರದಿ ನಿಡ್ಪಳ್ಳಿ:

ಮುಳುಗು ಸೇತುವೆ ಎಂದು ಖ್ಯಾತಿ ಪಡೆದಿರುವ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆಲ್ಯಡ್ಕ ಸೇತುವೆ ಈ ಮಳೆಗಾಲದಲ್ಲಿ ಮೊದಲ ಬಾರಿಗೆ ಜು.6 ರಂದು ಬೆಳಿಗ್ಗೆ ಸಂಪೂರ್ಣ ಮುಳುಗಡೆಯಾಗಿದ್ದು ಜನರ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಜು.5 ರ ರಾತ್ರಿಯಿಂದ ಸುರಿದ ಬಾರಿ ಮಳೆಗೆ ಜೂ.6 ರಂದು ಬೆಳಗ್ಗೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಸಾರ್ವಜನಿಕರಿಗೆ ಸಂಚರಿಸಲು ತೀವ್ರ ಸಮಸ್ಯೆ ಉಂಟಾಯಿತು. ಇಲ್ಲಿ ಚಲಿಸುವ ಖಾಸಗಿ ಬಸ್ಸುಗಳು ಸಂಟ್ಯಾರ್ ಮಾರ್ಗವಾಗಿ ಪುತ್ತೂರಿಗೆ ತೆರಳ ಬೇಕಾಯಿತು. ಬಸ್ಸು ಇಲ್ಲದೆ ಈ ರಸ್ತೆಯಲ್ಲಿ ಬೆಳಿಗ್ಗೆ ತಮ್ಮ ಕಾರ್ಯ ಚಟುವಟಿಕೆಗಳಿಗೆ ತೆರಳುವವರಿಗೆ ಬಹಳ ಸಮಸ್ಯೆ ಉಂಟಾಯಿತು. ಗುಮ್ಮಟಗದ್ದೆ, ದೇವಸ್ಯ ಭಾಗದವರು ಸುತ್ತಿ ಬಳಸಿ ಹೋಗುವಂತಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!