ಇದೇ ಮೊದಲ ಬಾರಿಗೆ ಗಣೇಶ ಹಬ್ಬಕ್ಕೆ ಅಂತಾರಾಷ್ಟ್ರೀಯ ಮೆರುಗು ನೀಡಲು ಮುಂದಾದ ‘ಮಹಾ’ ಸರಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯು ಗಣೇಶ ಚತುರ್ಥಿಯನ್ನು ಉತ್ಸವವನ್ನಾಗಿ ಆಚರಿಸಲು ಹೊರಟಿದೆ.

ತಮ್ಮ ನೆಲದ ಮೂಲ ಸಂಸ್ಕ್ರತಿ, ಭವ್ಯ ಪರಂಪರೆಯನ್ನು ವಿಶ್ವಕ್ಕೆ ತಿಳಿಸಲಿ ಸಜ್ಜಾಗಿದೆ. ನಾಳೆಯಿಂದ ಅಂದರೆ 19-28 ರ ತನಕ ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯ ಹಬ್ಬ ನಡೆಯಲಿದೆ.

ದೇಶದ ವಿಶಿಷ್ಟತೆ ಜೊತೆಗೆ ತಮ್ಮ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಗಣೇಶ ಹಬ್ಬ ಆಯೋಜಿಸುತ್ತಿದೆ. ವಾಣಿಜ್ಯ ನಗರಿ ಮುಂಬೈ, ಪುಣೆ, ರತ್ನಗಿರಿ, ಪಾಲ್ಘರ್‌ ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಉತ್ಸವವನ್ನು ಆಯೋಜಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಉತ್ಸವಕ್ಕೆ ವಿನೂತನ ಮೆರುಗು ನೀಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಮಹಾರಾಷ್ಟ್ರ ಸರ್ಕಾರದ ಪ್ರವಾಸೋಧ್ಯಮ ಸಚಿವ ಗಿರೀಶ್‌ ಮಹಾಜನ್‌, ಅಂತಾರಾಷ್ಟ್ರೀಯ ಗಣೇಶೋತ್ಸವ ಕೇವಲ ತೋರಿಕೆಯ ವೈಭವ ಅಲ್ಲ ಎಂದಿದ್ದಾರೆ. ಇದು ಮಹಾರಾಷ್ಟ್ರದ ನಾಡಿ ಮಿಡಿತ, ಇದು ಆತ್ಮನಿರ್ಭರ ಗುರಿ ಹೊಂದಿದೆ. ಗಣೇಶ ಹಬ್ಬವು ಸರಿಸಾಟಿ ಇಲ್ಲದ ನಮ್ಮ ಕಲೆ, ಸಂಸ್ಕೃತಿ ಮತ್ತು ವೈಶಿಷ್ಟತೆಯನ್ನು ಜಾಗತಿಕ ಮಟ್ಟದಲ್ಲಿ ತಿಳಿಸುತ್ತದೆ ಎಂದರು.

ಅಂತಾರಾಷ್ಟ್ರೀಯ ಗಣೇಶೋತ್ಸವದ ಹಿನ್ನೆಲೆಯಲ್ಲಿ ಗೇಟ್‌ ವೇ ಆಫ್‌ ಇಂಡಿಯಾದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮರಳು ಕಲೆಯ ಪ್ರದರ್ಶನ, ಮೊಸಾಯಿಕ್‌ ಕಲೆಗಳ ವಿಶೇಷತೆಗಳ ಅನಾವರಣ ಮಾಡಲಾಗುತ್ತದೆ. ಮಹಾರಾಷ್ಟ್ರ ನೆಲದ ಇತಿಹಾಸದ ಕತೆಗಳನ್ನು ಸಾರುವ ನೃತ್ಯ, ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!