ಇಂದು ಕ್ಯಾನ್ಸರ್ ಜಾಗೃತಿ ದಿನವಾಗಿದೆ. ಈ ದಿನದಂದು ರಾಜ್ಯಾದ್ಯಂತ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಕ್ಯಾನ್ಸರ್ ಯಾಕೆ ಬರುತ್ತದೆ ಎನ್ನುವ ಮಾಹಿತಿಯನ್ನು ಎಲ್ಲರೂ ತಿಳಿದುಕೊಳ್ಳಬೇಕಾದ್ದು.
ಕ್ಯಾನ್ಸರ್ ಬರಲು ಕಾರಣ ಏನು ಇಲ್ಲಿದೆ ಮಾಹಿತಿ
ಕೆಲವೊಂದು ರೀತಿಯ ಜೆನಿಟಿಕ್ ಮ್ಯುಟೇಷನ್‌ಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ.
ರೇಡಿಯೇಷನ್, ಕೆಮಿಕಲ್ಸ್ ಹಾಗೂ ವಾತಾವರಣದಲ್ಲಿನ ವಿಷಕ್ಕೆ ದಿನವೂ ಒಗ್ಗಿಕೊಳ್ಳುವವರ ಡಿಎನ್‌ಎ ಡ್ಯಾಮೇಜ್ ಆಗುತ್ತದೆ. ಈ ಕಾರಣದಿಂದಲೂ ಕ್ಯಾನ್ಸರ್ ಬರಬಹುದು.
ನಿಮ್ಮ ಲೈಫ್‌ಸ್ಟೈಲ್ ಕೂಡ ಇದಕ್ಕೆ ಕಾರಣವಾಗಿರಬಹುದು. ಮದ್ಯಪಾನ, ಕೆಟ್ಟ ಆಹಾರ, ವ್ಯಾಯಾಮ ಮಾಡದೇ ಇರುವುದು, ಸೂರ್ಯನಿಗೆ ದಿನವೂ ಒಡ್ಡಿಕೊಳ್ಳುವುದು.
ಹೆಪಟೈಟಿಸ್ ಬಿ, ಹೆಚ್‌ಪಿವಿ ಹಾಗೂ ಹೆಚ್‌ಐವಿಯಂಥ ವೈರಸ್‌ಗಳು ಕೂಡ ಕ್ಯಾನ್ಸರ್ ರಿಸ್ಕ್ ಹೆಚ್ಚು ಮಾಡುತ್ತದೆ.
ಇನ್ನು ವಯಸ್ಸು ಹೆಚ್ಚಾದಂತೆ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.
ತಡೆಯೋಕೆ ಏನು ಮಾಡಬಹುದು?
ಟೊಬ್ಯಾಕೊ, ಮದ್ಯಪಾನ ಹಾಗೂ ಧೂಮಪಾನ ಮಾಡಬೇಡಿ
ಆರೋಗ್ಯಕರ ಆಹಾರಕ್ಕೆ ಮಣೆ ಹಾಕಿ
ವ್ಯಾಯಾಮ, ವಾಕ್, ಯೋಗ ಒಂದಾದರೂ ರೂಢಿ ಮಾಡಿ
ಸೂರ್ಯನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.
ಆಗಾಗ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳಿ