ಹೀಗಿದೆ ನೋಡಿ ಕಾಂಗ್ರೆಸ್ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಹಾದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುವ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಆರಂಭಗೊಳ್ಳುತ್ತಿದ್ದು, ಈ ಯಾತ್ರೆ ಎಲ್ಲೆಲ್ಲಿ ಸಂಚರಿಸಲಿದೆ? ಇಲ್ಲಿದೆ ಮಾಹಿತಿ…

ಎಲ್ಲಿಂದ ಎಲ್ಲಿಗೆ ಸಾಗಲಿದೆ ಯಾತ್ರೆ?
ಭಾರತ್ ಜೋಡೋ ನ್ಯಾಯ್ ಯಾತ್ರೆ ಮಣಿಪುರದಿಂದ ಮುಂಬೈವರೆಗೆ ಹಮ್ಮಿಕೊಳ್ಳಲಾಗಿದೆ

ಎಷ್ಟು ದಿನಗಳ ‘ಯಾತ್ರೆ’ ಇದು?
ಸದ್ಯದ ಮಾಹಿತಿಗಳ ಪ್ರಕಾರ ಈ ಯಾತ್ರೆಯು ೬೭ ದಿನಗಳ ಅವಧಿಯನ್ನು ಹೊಂದಿದೆ.

ಎಷ್ಟು ರಾಜ್ಯ, ಜಿಲ್ಲೆಗಳಿಗೆಲ್ಲಾ ಭೇಟಿ ನೀಡಲಿದೆ ಯಾತ್ರೆ?
ಒಟ್ಟು 14 ರಾಜ್ಯ, 110 ಜಿಲ್ಲೆಗಳು, 100 ಲೋಕಸಭಾ ಕ್ಷೇತ್ರಗಳು, 337 ವಿಧಾನಸಭಾ ಕ್ಷೇತ್ರಗಳನ್ನು ಹಾದುಹೋಗಲಿದೆ ಈ ಯಾತ್ರೆ.

ಯಾತ್ರೆ ಸಾಗುವ ಒಟ್ಟು ದೂರ ಎಷ್ಟು?
ಒಟ್ಟು 66 ದಿನಗಳ ಕಾಲ ಬಸ್ ಹಾಗೂ ಕಾಲ್ನಡಿಗೆಯಲ್ಲಿ ಸಾಗಲಿರುವ ಈ ಯಾತ್ರೆ, ಬರೋಬ್ಬರಿ 6,713 ಕಿ.ಮೀಗಳನ್ನು ಕ್ರಮಿಸುವ ಗುರಿ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!