September 18, 2026
Friday, September 18, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 92 | ಪ್ರೋಟೀನ್‌+ ಗುಡ್‌ ಕಾರ್ಬೋಹೈಡ್ರೇಟ್ಸ್‌+ ವಿಟಮಿನ್ಸ್‌ ಎಲ್ಲವೂ ಇರುವ ಪರ್ಫೆಕ್ಟ್‌ ತಿಂಡಿ ಇದು

ಸಾಮಾಗ್ರಿಗಳು
ಗೆಣಸು
ನೆನೆಸಿದ ಕಡ್ಲೆಕಾಳು
ಈರುಳ್ಳಿ
ಕೊತ್ತಂಬರಿ ಸೊಪ್ಪು
ಜೀರಿಗೆ ಪುಡಿ
ಹಸಿಮೆಣಸು+ಪುದೀನಾ ಚಟ್ನಿ
ಹುಣಸೆಹುಳಿ+ ಡೇಟ್ಸ್‌ ಚಟ್ನಿ
ದಾಳಿಂಬೆ
ಖಾಕ್ರಾ ಅಥವಾ ಮಿಕ್ಸ್‌ಚರ್‌
ಉಪ್ಪು

ಮಾಡುವ ವಿಧಾನ
ಮೊದಲು ಗೆಣಸು ಹಾಗೂ ಕಡ್ಲೆಕಾಳನ್ನು ಸ್ಟೀಮ್‌ ಮಾಡಿಕೊಳ್ಳಿ, ಎರಡೂ ಸಂಪೂರ್ಣ ಬೆಂದ ನಂತರ ಆರಲು ಬಿಡಿ
ತಣ್ಣಗಾದ ಮೇಲೆ ಗೆಣಸಿನ ಸಿಪ್ಪೆ ಬಿಡಿಸಿ, ಆಲೂಗಡ್ಡೆ ರೀತಿ ಚಿಕ್ಕಕೆ ಹೆಚ್ಚಿಕೊಳ್ಳಿ
ಆನಂತರ ಅದನ್ನು ಒಂದು ಬೌಲ್‌ಗೆ ಹಾಕಿ, ಮೇಲೆ ಹಸಿ ಈರುಳ್ಳಿ ಹಾಕಿ, ಕಾಳುಗಳು, ಕೊತ್ತಂಬರಿ ಸೊಪ್ಪು ಹಾಕಿ
ನಂತರ ಉಪ್ಪು, ಸ್ವಲ್ಪ ಖಾರದಪುಡಿ ಅಥವಾ ಹಸಿಮೆಣಸು, ಉಪ್ಪು, ಜೀರಾಪುಡಿ ಹಾಕಿ
ಚೆನ್ನಾಗಿ ಮಿಕ್ಸ್‌ ಮಾಡಿ, ಆನಂತರ ಹಸಿಮೆಣಸು+ಪುದೀನಾ ಚಟ್ನಿ, ಹುಣಸೆಹುಳಿ+ ಡೇಟ್ಸ್‌ ಚಟ್ನಿ ಹಾಕಿ ಮಿಕ್ಸ್‌ ಮಾಡಿ
ನಂತರ ಖಾಕ್ರಾ ಅಥವಾ ಮಿಕ್ಸ್‌ಚರ್‌ ಹಾಕಿ, ದಾಳಿಂಬೆ ಹಾಕಿದ್ರೆ ತಿಂಡಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !