ಹರಿಪ್ರಿಯಾ-ವಸಿಷ್ಠ ಸಿಂಹ ನಡುವೆ ಪ್ರೀತಿಯಾಗೋಕೆ ಇದೇ ಕಾರಣವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರ ಜೋಡಿ ನೋಡಿ ಇಡೀ ಸ್ಯಾಂಡಲ್‌ವುಡ್ ಆಶ್ಚರ್ಯಪಟ್ಟಿದೆ.
ಯಾರಿಗೂ ಗೊತ್ತಿಲ್ಲದೇ ಇದೆಲ್ಲಾ ಆಗಿದ್ದು ಯಾವಾಗ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಹೊಸ ಸಿನಿಮಾವೊಂದರಲ್ಲಿ ಇವರಿಬ್ಬರೂ ನಟಿಸುತ್ತಿದ್ದು, ಶೂಟಿಂಗ್ ವೇಳೆ ಪ್ರೀತಿಯಾಗಿದೆ ಎಂದು ಹೇಳುತ್ತಿದ್ದಾರೆ.
ಆದರೆ ಇವರಿಗೆ ಪ್ರೀತಿಯಾಗಿದ್ದು, ಶೂಟಿಂಗ್ ವೇಳೆ ಅಲ್ಲ. ಇವರ ಪ್ರೀತಿಗೆ ಕಾರಣ ಒಂದು ನಾಯಿಮರಿಯಂತೆ!

ಹೌದು, ಹರಿಪ್ರಿಯಾ ಎರಡು ನಾಯಿಗಳನ್ನು ಸಾಕಿದ್ದರು. ಅದರಲ್ಲಿ ಒಂದು ನಾಯಿ ತೀರಿಕೊಂಡಿತ್ತು. ಜೊತೆಯಿಲ್ಲದೆ ನಾಯಿ ಒಂಟಿಯಾಗಿತ್ತು ಎಂದು ವಸಿಷ್ಠ ಹರಿಪ್ರಿಯಾಗೆ ಮತ್ತೊಂದು ನಾಯಿಮರಿ ತಂದುಕೊಟ್ಟಿದ್ದಾರೆ. ಅಲ್ಲಿಂದ ಇವರ ಪ್ರೀತಿ ಆರಂಭವಾಗಿದೆ ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ. ಕ್ರಿಸ್ಟಲ್ ಎಂದು ನಾಯಿಮರಿಗೆ ಹೆಸರಿಟ್ಟಿದ್ದೆವು. ಕ್ರಿಸ್ಟಲ್ ಮೈಮೇಲೆ ಹೃದಯದ ಆಕಾರದ ಮಚ್ಚೆ ಕೂಡ ಇತ್ತು. ಸಿಂಹ ನನಗಾಗಿ ಸೀಕ್ರೆಟ್ ಮೆಸೇಜ್ ಕಳಿಸಿದ್ದರಾ ಎಂದು ಈಗ ಅನ್ನಿಸುತ್ತಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!