ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಮಂದಿಗೆ ಭಯಬೀಳಿಸಿದ್ದ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ, ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳ ಕೈಗೆ ಸಿಗದೇ ಆಟ ಆಡಿಸುತ್ತಿದೆ.
ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ, ಆದರೆ ಚುಚ್ಚುಮದ್ದು ಹಾಕಿದ ಮೇಲೆ ಚಿರತೆ ವೈದ್ಯರ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ.
ಹೌದು, ವೈದ್ಯ ಕಿರಣ್ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾಗಿದ್ದರು. ಈ ವೇಳೆ ಡಾಕ್ಟರ್ ಕುತ್ತಿಗೆಗೆ ಪರಚಿದೆ. ಜೊತೆಗೆ ಅಲ್ಲೇ ಇದ್ದ ಚಿರತೆ ಶಾರ್ಪ್ ಶೂಟರ್ ಮೇಲೂ ದಾಳಿ ಮಾಡಿ ಎಸ್ಕೇಪ್ ಆಗಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅರವಳಿಗೆ ಚುಚ್ಚುಮದ್ದು ನೀಡಿದ ೧೫ ನಿಮಿಷ ಅದರ ಪವರ್ ಆಕ್ಟೀವ್ ಆಗಿರುತ್ತದೆ, ಚುಚ್ಚುಮದ್ದು ನೀಡಿ ಅರ್ಧಗಂಟೆಯಾಗಿದ್ದು, ಮತ್ತೆ ಚಿರತೆ ಮಾಮೂಲಿಯಂತೆ ಆಗಿದೆ ಎಂದು ಹೇಳಲಾಗಿದೆ.