OSCAR | ಈ ಸಿನಿಮಾಗೆ ಆಸ್ಕರ್‌ನಲ್ಲಿ ಬರೋಬ್ಬರಿ ಏಳು ಪ್ರಶಸ್ತಿ! 

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆದಿದ್ದು, ಒಂದು ಸಿನಿಮಾ ಒಟ್ಟು ಏಳು ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್ (Everything everywhere all at once) ಎನ್ನುವ ಇಂಗ್ಲಿಷ್ ಸಿನಿಮಾ ಬರೋಬ್ಬರಿ ಏಳು ಪ್ರಶಸ್ತಿಯನ್ನು ಬಾಚಿಕೊಂಡಿದೆ. ಕಳೆದ ವರ್ಷ ರಿಲೀಸ್ ಆದ ಈ ಸಿನಿಮಾ ಮೂರು ಭಾಷೆಗಳಲ್ಲಿ ಇದೆ. ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್ ನಿರ್ದೇಶನದ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ.

Imageಅತ್ಯುತ್ತಮ ಸಿನಿಮಾ
ಅತ್ಯುತ್ತಮ ನಿರ್ದೇಶನ
ಅತ್ಯುತ್ತಮ ನಟಿ
ಅತ್ಯುತ್ತಮ ಪೋಷಕ ನಟ
ಅತ್ಯುತ್ತಮ ಪೋಷಕ ನಟಿ
ಅತ್ಯುತ್ತಮ ಸಂಕಲನ
ಅತ್ಯುತ್ತಮ ಮೂಲ ಚಿತ್ರಕಥೆ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!