October 17, 2026
Saturday, October 17, 2026
spot_img

ಅನ್ನ-ಚಪಾತಿಗೆ ಸೂಪರ್ ಕಾಂಬಿನೇಷನ್ ಈ ಅನಾನಸ್ ಪಲ್ಯ: ನೀವೂ ಒಮ್ಮೆ ಟ್ರೈ ಮಾಡಿ

ರಾತ್ರಿ ಊಟಕ್ಕೆ ವಿಭಿನ್ನ ರುಚಿಯ ಸೈಡ್ ಡಿಶ್ ಬೇಕೆಂದರೆ ಅನಾನಸ್ ಪಲ್ಯ ಉತ್ತಮ ಆಯ್ಕೆ. ಸಿಹಿ, ಹುಳಿ ಮತ್ತು ಖಾರದ ರುಚಿಯ ಈ ಪಲ್ಯ ಅನ್ನ, ಚಪಾತಿ, ರೊಟ್ಟಿ ಅಥವಾ ದೋಸೆಯೊಂದಿಗೆ ಸವಿಯಲು ತುಂಬಾ ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

ಅನಾನಸ್ – 1 ಕಪ್
ಬೆಲ್ಲ – 2 ರಿಂದ 3 ಚಮಚ
ತೆಂಗಿನ ತುರಿ – ½ ಕಪ್
ಒಣ ಮೆಣಸಿನಕಾಯಿ – 2 ರಿಂದ 3
ಅರಿಶಿನ – ¼ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಹುಣಸೆ ರಸ – 1 ಚಮಚ

ಒಗ್ಗರಣೆಗೆ

ಎಣ್ಣೆ – 2 ಚಮಚ
ಸಾಸಿವೆ – ½ ಚಮಚ
ಉದ್ದಿನ ಬೇಳೆ – 1 ಚಮಚ
ಕಡಲೆ ಬೇಳೆ – 1 ಚಮಚ
ಕರಿಬೇವಿನ ಎಲೆ – ಸ್ವಲ್ಪ

ಮಾಡುವ ವಿಧಾನ

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಗೂ ಕರಿಬೇವಿನ ಎಲೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಅನಾನಸ್ ತುಂಡುಗಳನ್ನು ಸೇರಿಸಿ 2–3 ನಿಮಿಷ ಹುರಿಯಿರಿ.

ಅರಿಶಿನ, ಉಪ್ಪು, ಬೆಲ್ಲ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಮುಚ್ಚಳ ಹಾಕಿ ಅನಾನಸ್ ಮೆತ್ತಗಾಗುವವರೆಗೆ ಬೇಯಿಸಿ.
ತೆಂಗಿನ ತುರಿ ಮತ್ತು ಒಣ ಮೆಣಸಿನಕಾಯಿಯನ್ನು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಈ ಮಸಾಲೆಯನ್ನು ಬೇಯಿಸಿದ ಅನಾನಸ್‌ಗೆ ಸೇರಿಸಿ ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ಹುಣಸೆ ರಸ ಸೇರಿಸಿ 5 ನಿಮಿಷ ಕುದಿಸಿ. ಮಸಾಲೆ ಚೆನ್ನಾಗಿ ಬೆರೆತ ಬಳಿಕ ಒಲೆ ಆರಿಸಿ.

ಬಿಸಿ ಬಿಸಿ ಅನ್ನ, ತುಪ್ಪ, ಚಪಾತಿ, ರೊಟ್ಟಿ ಅಥವಾ ದೋಸೆಯೊಂದಿಗೆ ಈ ಅನಾನಸ್ ಪಲ್ಯವನ್ನು ಸವಿದರೆ ರಾತ್ರಿ ಊಟದ ರುಚಿ ಇನ್ನಷ್ಟು ಹೆಚ್ಚುತ್ತದೆ.

Must Read