ಟಾಲ್ಕ್‌ ಬೆಬಿ ಪೌಡರ್‌ ಮಾರಾಟ ಸ್ಥಗಿತಗೊಳಿಸಲಿದೆ ಈ ಜನಪ್ರಿಯ ಕಂಪನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌
ಪ್ರಸಿದ್ಧ ಕಂಪನಿ ಜಾನ್ಸನ್‌ ಅಂಡ್‌ ಜಾನ್ಸನ್‌ ಕಂಪನಿಯು ತನ್ನ ಟಾಲ್ಕ್‌ ಆಧಾರಿತ ಬೆಬಿ ಪೌಡರ್‌ ಉತ್ಪಾದನೆಯನ್ನು 2023ರ ಹೊತ್ತಿಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. ವಿಶ್ವದಾದ್ಯಂತ ಸಾವಿರಾರು ಗ್ರಾಹಕರು ಸುರಕ್ಷತಾ ಮೊಕದ್ದಮೆಗಳನ್ನು ದಾಖಲಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿ ಹೇಳಿದೆ.

ಟಾಲ್ಕ್‌ ಆಧಾರಿತ ಪೌಡರ್‌ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಜಾನ್ಸನ್‌ ಬೆಬಿ ಪೌಡರ್‌ ಬೇಡಿಕೆ ಕುಸಿದಿದೆ. ಅಲ್ಲದೇ ಕೆನಡಾ ಹಾಗೂ ಯುಎಸ್‌ ಗಳಲ್ಲಿ ಸಾವಿರಾರು ಗ್ರಾಹಕರು ಕಂಪನಿಯ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದಾರೆ. ಮಾಹಿತಿಯೊಂದರ ಪ್ರಕಾರ ಸುಮಾರು 38 ಸಾವಿರ ಮೊಕದ್ದಮೆಗಳನ್ನು ಕಂಪನಿ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಟಾಲ್ಕ್‌ ಆಧಾರಿತ ಬೆಬಿ ಪೌಡರ್‌ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!