World Liver Day | ಕುಡಿಯದಿದ್ದರೂ ಬರುತ್ತದೆ ಲಿವರ್‌ನ ಈ ಸಮಸ್ಯೆ, ಅತಿ ತೂಕ ಮುಖ್ಯ ಕಾರಣ..

ಯಕೃತ್ತಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏ.19ನ್ನು ವಿಶ್ವ ಯಕೃತ್ ದಿನ ಎನ್ನಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೊಬ್ಬಿನ ಪಿತ್ತಜನಕಾಂಗದ ಸಮಸ್ಯೆ( Non alchoholic fatty liver) ಯನ್ನು ಸಾಕಷ್ಟು ಮಂದಿ ಅನುಭವಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಹೆಪಟೈಟಿಸ್ ಎ, ಹೆಪಟೈಟಿಸ್ ಬಿ, ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್ ಸಮಸ್ಯೆಗಳು ಹಿಂದಿಗಿಂತಲೂ ಈಗ ಹೆಚ್ಚಾಗಿವೆ.

ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣಗಳೇನು?

ಬೊಜ್ಜು, ಹೆಚ್ಚಾದ ತೂಕ
ಕೆಲವೊಂದು ಮೆಡಿಸಿನ್‌ಗಳಿಂದ
ಹೆಚ್ಚು ಕೊಲೆಸ್ಟ್ರಾಲ್
ಆರೋಗ್ಯಕರವಲ್ಲದ ದಿನಚರಿ
ಡಯಾಬಿಟಿಸ್ ಅಥವಾ ಪ್ರೀ ಡಯಾಬಿಟಿಸ್

ಲಕ್ಷಣಗಳೇನು?
ಹೊಟ್ಟೆ ನೋವು
ಸಣ್ಣ ಹೊಡೆತ ಬಿದ್ದರೂ ಬೇಗ ಗಾಯಗಳಾಗುವುದು
ಯಾವಾಗಲೂ ಸುಸ್ತು
ಗಾಢ ಹಳದಿ ಯೂರಿನ್
ಹಸಿವೇ ಆಗದಿರುವುದು
ವಾಂತಿ
ತಿಳಿ ಬಣ್ಣದ ಮಲ ವಿಸರ್ಜನೆ
ಜಾಂಡೀಸ್
ಕೆಂಪಾದ, ಕೈ ಕಾಲು

ತಡೆಗಟ್ಟುವುದು ಹೇಗೆ?
ಆರೋಗ್ಯಕರ ಡಯಟ್ ನಿಮ್ಮದಾಗಿರಲಿ, ಸೊಪ್ಪು ತರಕಾರಿ, ಹಣ್ಣಿಗೆ ಆದ್ಯತೆ ನೀಡಿ
ತೂಕ ಹೆಚ್ಚಿದ್ದಲ್ಲಿ ಅದನ್ನು ಇಳಿಸಿ, ಆರೋಗ್ಯಕರ ಆಹಾರ ಹಾಗೂ ವ್ಯಾಯಾಮ ಮಾಡಿ
ಕೂತಲ್ಲೇ ಕೂರಬೇಡಿ, ವ್ಯಾಯಾಮ, ಯೋಗ ರೂಢಿ ಮಾಡಿಕೊಳ್ಳಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!