RECIPE| ಬೆಳಗಿನ ತಿಂಡಿಗೆ ಈ ರೆಸಿಪಿ ದಿ ಬೆಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಳಗ್ಗಿನ ಹೊತ್ತು ಮನೆಯಲ್ಲಿ ಮಕ್ಕಳಿಗೆ ಶಾಲಾ ಕಾಲೇಜಿಗೆ ಹೋಗುವ ಗಡಿಬಿಡಿ..ಹಿರಿಯರಿಗೆ ಆಫೀಸ್‌ಗೆ ತೆರಳುವ ಬ್ಯುಸಿ… ಸಿಟಿಯಲ್ಲಿರುವವರಿಗಂತೂ ತಿಂಡಿ ರೆಡಿಮಾಡುವುದಕ್ಕೂ ಟೈಂ ಸಿಗೋದು ಕಷ್ಟ ಎಂಬ ಪರಿಸ್ಥಿತಿ..ಇಂತಹ ಸಮಯದಲ್ಲಿ ದಿಢೀರ್‌ ಆಗಿ ರುಚಿ ರುಚಿಯಾದ ಟಿಫಿನ್‌ ರೆಡಿಮಾಡೋದು ಕಷ್ಟನೇ…ಚಿಂತೆ ಬಿಡಿ. ಈ ರೆಸಿಪಿ ಟ್ರೈಮಾಡಿ…ನಿಮ್ಮ ಬ್ಯುಸಿ ಶೆಡ್ಯೂಲ್‌ಮದ್ಯೆಯೂ ಈ ರೆಸಿಪಿ ತುಂಬಾನೇ ಟೇಸ್ಟಿಯಾಗಿರುತ್ತದೆ. ಹಾಗೂ ಸುಲಭವೂ ಕೂಡಾ.

ಬ್ರೆಡ್‌ ಉಪ್ಪಿಟ್ಟು ಒಂದು ಟೇಸ್ಟಿ ಫುಡ್. ಇದು ಮಕ್ಕಳಿಗೂ ಇಷ್ಟ. ದೊಡ್ಡವರಿಗೂ ರುಚಿ!. ತಯಾರಿಸಲು  ಸುಲಭವೂ ಹೌದು. ಹಾಗಾದ್ರೆ ಹೇಗೆ ಮಾಡೋದು ನೋಡೋಣ.

ಬೇಕಾಗುವ ಸಾಮಾಗ್ರಿಗಳು:

ಬ್ರೆಡ್, ಈರುಳ್ಳಿಗಳು, ಟೊಮೆಟೊ, ಮಸಾಲೆ

ಮಾಡುವ ವಿಧಾನ:

ಬ್ರೆಡ್‌ಅನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಿ. ಈರುಳ್ಳಿ ಹಾಗೂ ಟೊಮೆಟೋವನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಸ್ಟವ್ ಹೆಚ್ಚಿ ಬಾಣಲೆಯನ್ನಿಟ್ಟು ಒಗ್ಗರಣೆಗೆ ರೆಡಿಮಾಡಿಕೊಳ್ಳಿ. ಶುದ್ಧವಾದ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ನಂತರ ಬೇವಿನ ಚೂರು, ಉದ್ದಿನಬೇಳೆಯನ್ನು ಹಾಕಿ. ಈರುಳ್ಳಿ, ಟೊಮೆಟೋ ಹಾಕಿ ಫ್ರೈಮಾಡಿಕೊಳ್ಳಿ. ಸ್ವಲ್ಪ ಸಾಸಿವೆ ಹಾಕಿ ಸಿಡಿಸಿಕೊಳ್ಳಿ. ಹಸಿಮೆಣಸನ್ನು ಕತ್ತರಿಸಿ ಇದೇ ಮಸಲಾಗೆ ಸೇರಿಸಿಕೊಳ್ಳಿ. ಸ್ವಲ್ಪ ಅರಸಿನ ಬೆರೆಸಿಕೊಳ್ಳಿ. ಬಾಯಲ್ಲಿ ನೀರೂರಿಸುವ ಪರಿಮಳ ಬರುತ್ತಿದ್ದಂತೆಯೇ ಬ್ರೆಡ್‌ ಚೂರುಗಳನ್ನು ಹಾಕಿ ಸರಿಯಾಗಿ ಮಿಶ್ರ ಮಾಡಿಕೊಳ್ಳಿ. ಇದು ಬೆಳಗ್ಗಿನ ಉಪಾಹಾರಕ್ಕೂ ಸೈ…ನೀವೂ ಟ್ರೈ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!