ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲ ಆರಂಭವಾಗಿದೆ. ಕರುಕಲು ಬಾಯಿಗೆ ಹಾಕುತ್ತಾ ಚಹಾ ಹೀರೋದ್ರ ಮಜಾನೇ ಬೇರೆ… ಹಾಗಾದ್ರೆ ಸಂಜೆ ಸ್ನಾಕ್ಸ್ ಟೈಂಗೆ ಈ ತಿಂಡಿ ಟ್ರೈ ಮಾಡಿ. ಮಸ್ತ್ ಮಜಾ ಇರುತ್ತೆ ನೋಡಿ.
ಸಂಜೆ ಟೀ ಜೊತೆ ಬಿಸಿ ಬಿಸಿಯಾದ ಖಾರ ಕಡ್ಲೆಪುರಿ ಸೂಪರ್ ಆಗಿರುತ್ತೆ.
ಬೇಕಾಗುವ ಸಾಮಾಗ್ರಿ: ಮೈಸೂರು ಕಡ್ಲೆ ಪುರಿ , ತೆಂಗಿನೆಣ್ಣೆ, ಸಾಸಿವೆ, ಹರಿಗಡಲೆ ಎರಡು ಚಮಚ, ಬೆಳ್ಳುಳ್ಳಿ , ಕರಿಬೇವು, ಒಣಮೆಣಸಿನ ಕಾಯಿ ನಾಲ್ಕು, ಒಣ ಕೊಬ್ಬರಿ ಚೂರು, ಅರಶಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಕಡ್ಲೆಪುರಿಯನ್ನು ತೆಂಗಿನೆಣ್ಣೆ ಹಾಕಿ ಪ್ರೈ ಮಾಡಿ. ನಂತರ ಉಳಿದೆಲ್ಲಾ ವಸ್ತುಗಳನ್ನು ಸೇರಿಸಿ ಚೆನ್ನಾಗಿ ಫ್ರೈಮಾಡಿ ಇಟ್ಟುಕೊಳ್ಳಿ. ಕಡ್ಲೆಪುರಿ ಸೇರಿಸ್ ಮಿಶ್ರಮಾಡಿ. ಕರಿಬೇವಿನ ಒಗ್ಗರಣೆ ನೀಡಿ. ಬಿಸಿ ಬಿಸಿಯಿರುವಾಗಲೇ ತಿನ್ನಿ. ಹೊರಗಡೆ ಮಳೆ ಸುರಿಯುವಾಗ ಕಾಫಿ/ಟೀ ಜೊತೆ ಈ ರುಚಿ ಸೂಪರ್ ಆಗಿರುತ್ತೆ.