ಈ ಬೆಳ್ಳಿ ಪದಕ ನಮಗೆ ಚಿನ್ನದ ಪದಕವಿದ್ದಂತೆ: ನೀರಜ್ ಚೋಪ್ರಾಗೆ ಕರೆ ಮಾಡಿದ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆನೀರಜ್ ಚೋಪ್ರಾ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 89.45 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್​ಗಳಲ್ಲಿ ಪದಕ ಭೇಟೆಯಾಡಿದ ಭಾರತದ ನಾಲ್ಕನೇ ಅಥ್ಲೀಟ್ ಎನಿಸಿಕೊಂಡರು. ಹೀಗಾಗಿ ನೀರಜ್ ಅವರ ಸಾಧನೆಗೆ ಭಾರತದಾದ್ಯಂತೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೀಗ ಪ್ರಧಾನಿ ಮೋದಿ ಕೂಡ ನೀರಜ್ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.

ಬೆಳ್ಳಿ ಪದಕ ಗೆದ್ದ ಭಾರತದ ನೀರಜ್ ಚೋಪ್ರಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿಯಲ್ಲಿ ಮಾತನಾಡಿದರು. ಈ ಸಂದರ್ಭ ನೀರಜ್ ಅವರ ಅದ್ಭುತ ಸಾಧನೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ, ಅವರ ಗಾಯದ ಬಗ್ಗೆಯೂ ವಿಚಾರಿಸಿದರು. ಇದಲ್ಲದೆ ನೀರಜ್ ತಾಯಿಯ ಕ್ರೀಡಾ ಮನೋಭಾವವನ್ನು ಶ್ಲಾಘಿಸಿದರು. ನೀರಜ್ ಚೋಪ್ರಾ ಅವರ ಈ ಸಾಧನೆಗಾಗಿ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಲಾಗುತ್ತಿದೆ.

ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಮೂಲಕ ಕೋಟ್ಯಾಂತರ ಮಂದಿ ಭಾರತೀಯರಿಗೆ ಹೆಮ್ಮೆ ತಂದಿದ್ದೀರಾ. ಇಡೀ ರಾತ್ರಿ ಕೋಟ್ಯಾಂತರ ಜನರು ನೀವು ಗೆಲ್ಲುತ್ತೀರೆಂದು ಭರವಸೆಯೊಂದಿಗೆ ಕಾಯುತ್ತಿದ್ದರು, ನೀವು ಅದನ್ನು ನಿಜವಾಗಿಸಿದ್ದೀರಾ ಎಂದು ಪ್ರಶಂಸಿಸಿದರು. ಇದಕ್ಕೆ ಉತ್ತರಿಸಿದ ನೀರಜ್​ ಭಾರತೀಯರು ನನ್ನಿಂದ ಚಿನ್ನ ನಿರೀಕ್ಷಿಸಿದ್ದರು. ಆದರೆ ಗಾಯದ ಕಾರಣ ನನ್ನಿಂದ ಅವರ ಆಸೆಯನ್ನ ನಿರಾಶೆಗೊಳಿಸಲು ಸಾಧ್ಯವಾಗಲಿಲ್ಲ. ಕ್ರೀಡೆಯಲ್ಲಿ ಏರಿಳಿತಗಳು ಆಗುತ್ತಿರುತ್ತವೆ. ಮುಂಬರುವ ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತೇನೆ ಎಂದರು.

ಆದರೆ ಮೋದಿ ಒಲಿಂಪಿಕ್ಸ್​ನಲ್ಲಿ ತೋರಿದ ಪ್ರಯತ್ನವನ್ನು ಶ್ಲಾಘಿಸಿದರು, ಗಾಯದ ಹೊರತಾಗಿಯೂ ನೀವು ನಿಮ್ಮ ಪ್ರಯತ್ನವನ್ನು ಮಾಡಿದ್ದೀರಾ, ಈ ಬೆಳ್ಳಿ ಪದಕ ನಮಗೆ ಚಿನ್ನದ ಪದಕವಿದ್ದಂತೆ, ನಾವು ಇದಕ್ಕೆ ಹೆಮ್ಮೆ ಪಡುತ್ತೀವಿ ಎಂದು ಸಂತೈಸಿದರು.

ತಾಯಿಯನ್ನು ಪ್ರಶಂಸಿಸಿದ ಮೋದಿ
ಈ ಸಂದರ್ಭದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದ ಬಗ್ಗೆ ಚೋಪ್ರಾ ಅವರ ತಾಯಿ ನೀಡಿದ್ದ ಪ್ರತಿಕ್ರಿಯೆಯನ್ನೂ ಮೋದಿ ಪ್ರಸ್ತಾಪಿಸಿದರು. ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದಿದ್ದಕ್ಕೆ ಆತನೂ ಕೂಡ ನನ್ನ ಮಗನಿದ್ದಂತೆ ಎಂದಿದ್ದನ್ನ ನೆನಪಿಸಿಕೊಂಡು, ಅವರ ಕ್ರೀಡಾಸ್ಫೂರ್ತಿಯನ್ನು ಶ್ಲಾಘಿಸಿದರು.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!