September 27, 2026
Sunday, September 27, 2026
spot_img

ಊಟಕ್ಕೆ ಈ ಸಿಂಪಲ್‌ ಜೀರಾ ರೈಸ್‌ ಮಾಡಿದ್ರೆ ಇಡೀ ಮನೆ ತುಂಬಾ ಘಮಘಮ ಪರಿಮಳ

ಪುಟಾಣಿಗಳಿಗೆ ಹಾಗೂ ಹಿರಿಯರಿಗೆ ಸ್ವಲ್ಪವೂ ಖಾರ ಇಲ್ಲದ ಸಿಂಪಲ್‌ ಜೀರಾ ರೈಸ್‌ ತುಂಬಾನೇ ಇಷ್ಟವಾಗುತ್ತದೆ. ನೀವು ಮನೆಯಲ್ಲಿ ಈ ರೈಸ್‌ ತಯಾರಿಸಿದ್ರೆ ಇಡೀ ಮನೆತುಂಬಾ ಘಮಘಮ ಪರಿಮಳ ಬೀರುತ್ತದೆ. ಮತ್ಯಾಕೆ ತಡ ಇಂದೇ ಸಿಂಪಲ್‌ ಜೀರಾ ರೈಸ್‌ ತಯಾರಿಸಿ, ಇದರ ಜೊತೆ ದಾಲ್‌ ಇದ್ದರೆ ಇನ್ನೂ ಪರ್ಫೆಕ್ಟ್‌

ಸಾಮಾಗ್ರಿಗಳು

ಬಾಸುಮತಿ ಅಕ್ಕಿ
ತುಪ್ಪ
ಚಕ್ಕೆ
ಲವಂಗ
ಏಲಕ್ಕಿ
ಮರಾಠಿಮೊಗ್ಗು
ಪಲಾವ್‌ ಎಲೆ
ಜೀರಿಗೆ
ಹಸಿಮೆಣಸು
ಎಣ್ಣೆ
ಶುಂಠಿ
ಕರಿಬೇವು

ಮಾಡುವ ವಿಧಾನ

ಮೊದಲು ಕುಕ್ಕರ್‌ಗೆ ಎಣ್ಣೆ, ಪಲಾವ್‌ ಎಲೆ, ತುಪ್ಪ ಹಾಕಿ, ಮಸಾಲೆ ಪದಾರ್ಥಗಳನ್ನು ಹಾಕಿ ಆನಂತರ ಇದಕ್ಕೆ ಜೀರಿಗೆ, ಕರಿಬೇವು ಹಾಕಿ ಬಾಡಿಸಿ
ನಂತರ ಹಸಿಮೆಣಸು ಹಾಗೂ ಹೆಚ್ಚಿದ ಶುಂಠಿಯನ್ನು ಹಾಕಿ ಮಿಕ್ಸ್‌ ಮಾಡಿ
ಆನಂತರ ತೊಳೆದ ಬಾಸುಮತಿ ಅಕ್ಕಿ, ಉಪ್ಪು ಹಾಕಿ ಮಿಕ್ಸ್‌ ಮಾಡಿ. ಒಂದು ಲೋಟ ಅಕ್ಕಿಗೆ ಒಂದು ಮುಕ್ಕಾಲು ಲೋಟ ನೀರು ಹಾಕಿ
ಸಣ್ಣ ಉರಿಯಲ್ಲಿ ಒಂದು ವಿಶಲ್‌ ಹಾಕಿಸಿದ್ರೆ ಜೀರಾ ರೈಸ್‌ ರೆಡಿ

Must Read