ಫಸ್ಟಿಗೇ ತಪ್ಪು ಒಪ್ಕೊಂಡಿದ್ರೆ ಈ ಸ್ಥಿತಿ ಬರ್ತಾ ಇರ್ಲಿಲ್ಲ: ಸಿಎಂಗೆ ಸೋಮಣ್ಣ ಟಾಂಗ್‌

ಹೊಸದಿಗಂತ ವರದಿ ಹುಬ್ಬಳ್ಳಿ:

ಸಿದ್ದರಾಮಯ್ಯ, ನಾನು ಜನತಾ ಪರಿವಾರದಿಂದ ಬಂದವರು. ಮುಡಾ ಹಗರಣದಲ್ಲಿ ಆರಂಭದಲ್ಲಿಯೇ ತಪ್ಪು ಒಪ್ಪಿಕೊಂಡಿದ್ದರೆ ಸಿಎಂಗೆ ಈ ಸ್ಥಿತಿ‌ ಬರುತ್ತಿದ್ದಿಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನನ್ನ‌ ಸ್ನೇಹಿತರು ಅವರಿಗೆ ಕೈ ಮುಗಿದು ಕೇಳುವೆ, ಮುಡಾದಲ್ಲಿ‌ ಕೈ-ಕಾಲು, ಬಾಯಿ ಸುಟ್ಟುಕೊಂಡಿದ್ದು ಸಾಕು. ಒಂದು ತಪ್ಪು‌ಮುಚ್ಚಲು 50 ತಪ್ಪು ಮಾಡಿದ್ದೀರಿ‌ ಇನ್ನಾದರು ರಾಜೀನಾಮೆ ನೀಡಿ‌ ಮಾದರಿಯಾಗಿ ಎಂದರು.
ಸಿದ್ದರಾಮಯ್ಯ ಅವರಂತಹ ನಾಯಕರಿಗೆ ಇದು ಶೋಭೆ ತರುವುದಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!