ವೀಕೆಂಡ್ ಬಂತು ಅಂದ್ರೆ ಸಾಕು, ನಾಲಿಗೆ ಏನಾದ್ರೂ ಸ್ಪೈಸಿಯಾಗಿ ತಿನ್ಬೇಕು ಅಂತ ಕೇಳ್ತಾ ಇರುತ್ತೆ! ರೆಸ್ಟೋರೆಂಟ್‌ಗೆ ಹೋಗಿ ಜೇಬು ಖಾಲಿ ಮಾಡಿಕೊಳ್ಳೋ ಬದಲು, ಮನೆಯಲ್ಲೇ ‘ಸೋಯಾ ಚಿಲ್ಲಿ’ ಟ್ರೈ ಮಾಡಿ.
ಸೋಯಾ ಚಂಕ್ಸ್
ಕಾರ್ನ್ ಫ್ಲೋರ್ & ಮೈದಾ
ಜಿಂಜರ್-ಗಾರ್ಲಿಕ್ ಪೇಸ್ಟ್
ಈರುಳ್ಳಿ & ಕ್ಯಾಪ್ಸಿಕಂ
ಹಸಿಮೆಣಸಿನಕಾಯಿ & ಬೆಳ್ಳುಳ್ಳಿ
ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೊ ಸಾಸ್
ಉಪ್ಪು, ಖಾರದ ಪುಡಿ, ಎಣ್ಣೆ
ಮೊದಲು ಬಿಸಿ ನೀರಲ್ಲಿ ಸೋಯಾ ಚಂಕ್ಸ್ ಹಾಕಿ 5 ನಿಮಿಷ ನೆನೆಸಿ. ಆಮೇಲೆ ನೀರೆಲ್ಲ ಚೆನ್ನಾಗಿ ಹಿಂಡಿ ತೆಗೆದು ಪಕ್ಕಕ್ಕೆ ಇಟ್ಕೊಳ್ಳಿ. ಈಗ ಸೋಯಾ ಚಂಕ್ಸ್‌ಗೆ ಮೈದಾ, ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಬಿಸಿ ಎಣ್ಣೆಯಲ್ಲಿ ಈ ಸೋಯಾ ಚಂಕ್ಸ್ ಹಾಕಿ, ಗೋಲ್ಡನ್ ಬ್ರೌನ್ ಬರೋವರೆಗೂ ಕರಿದು ಎತ್ತಿಟ್ಟುಕೊಳ್ಳಿ. ಈಗ ಇನ್ನೊಂದು ಪ್ಯಾನ್‌ನಲ್ಲಿ ಎಣ್ಣೆ ಕಾಯಿಸಿ, ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಆಮೇಲೆ ಕಟ್ ಮಾಡಿದ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಹೈ ಫ್ಲೇಮ್‌ನಲ್ಲಿ ಬೇಯಿಸಿ. ಈಗ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್ ಹಾಕಿ ಮಿಕ್ಸ್ ಮಾಡಿ.
ಕರಿದು ಇಟ್ಟಿರೋ ಸೋಯಾ ಚಂಕ್ಸ್ ಹಾಕಿ, ಸಾಸ್ ಎಲ್ಲಾ ಸೋಯಾಗೆ ಹಿಡಿಯೋ ತರ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿದ್ರೆ… ಬಿಸಿ ಬಿಸಿ, ಖಾರ ಖಾರವಾದ ಸೋಯಾ ಚಿಲ್ಲಿ ರೆಡಿ!



