ಬೇಕಾಗುವ ಸಾಮಗ್ರಿಗಳು:
ಚಿಕನ್
ಮೊಸರು
ಈರುಳ್ಳಿ
ಟೊಮೆಟೊ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಖಾರದ ಪುಡಿ
ಧನಿಯಾ ಪುಡಿ
ಅರಿಶಿನ ಪುಡಿ
ಗರಂ ಮಸಾಲಾ
ಎಣ್ಣೆ, ಜೀರಿಗೆ, ಒಣ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು.
ಉಪ್ಪು
ಮಾಡುವ ವಿಧಾನ
ತೊಳೆದ ಚಿಕನ್‌ಗೆ ಅರ್ಧ ಕಪ್ ಮೊಸರು, ಅರಿಶಿನ, ಸ್ವಲ್ಪ ಖಾರದ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ, 20 ನಿಮಿಷ ಬದಿಗಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಕಾಯಿಸಿ, ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ. ಈಗ ಮ್ಯಾರಿನೇಟ್ ಮಾಡಿದ ಚಿಕನ್, ಧನಿಯಾ ಪುಡಿ, ಖಾರದ ಪುಡಿ ಹಾಕಿ ಚೆನ್ನಾಗಿ ಮಸಾಲೆಯಲ್ಲಿ ಕಲಸಿ. ಮುಚ್ಚಳ ಮುಚ್ಚಿ ಚಿಕನ್ ಬೆಂದು ಎಣ್ಣೆ ತೇಲುವವರೆಗೆ 12-15 ನಿಮಿಷ ಬೇಯಿಸಿ. ಉಳಿದ ಅರ್ಧ ಕಪ್ ಮೊಸರು ಮತ್ತು ಗರಂ ಮಸಾಲಾ ಸೇರಿಸಿ, ಉರಿ ಸಣ್ಣಗೆ ಮಾಡಿ 3-4 ನಿಮಿಷ ಕೈಯಾಡಿಸಿ. ಇನ್ನೊಂದು ಚಿಕ್ಕ ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ, ಜೀರಿಗೆ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಸಿಡಿಸಿ. ಈ ಒಗ್ಗರಣೆಯನ್ನು ಚಿಕನ್ ಮೇಲೆ ಸುರಿದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಬಿಸಿಬಿಸಿ ರೊಟ್ಟಿ, ಚಪಾತಿ ಅಥವಾ ರೈಸ್ ಜೊತೆ ಸವಿಯಲು ಸಖತ್ ಟೇಸ್ಟಿಯಾದ ದಹಿ ತಡ್ಕಾ ಚಿಕನ್ ರೆಡಿ!



