ಈ ವ್ಯವಸ್ಥೆ ಸರಿಯಲ್ಲ: ದರ್ಶನ್ ಗೆ ರಾಜಾತಿಥ್ಯ ನೋಡಿ ರೇಣುಕಾಸ್ವಾಮಿ ತಂದೆ ಕಣ್ಣೀರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಕಳೆದ ಎರಡು ತಿಂಗಳಿನಿಂದ ಪರಪ್ಪನ ಜೈಲು ಸೇರಿರುವ ಎ2 ಆರೋಪಿ ನಟ ದರ್ಶನ್​, ಇದೀಗ ಇತರೆ ರೌಡಿಗಳ ಜತೆ ಜೈಲಿನೊಳಗೆ ಒಂದು ಕೈನಲ್ಲಿ ಕಾಫಿ ಲೋಟ ಹಾಗೂ ಮತ್ತೊಂದು ಕೈಯಲ್ಲಿ ಸಿಗರೇಟ್​ ತುಂಡು ಹಿಡಿದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಹಲವರ ಆಕ್ರೋಶಕ್ಕೆ ಗುರಿಯಾಗಿದೆ.

ಇನ್ನು ಈ ವಿಷಯ ತಿಳಿದ ಮೃತ ರೇಣುಕಸ್ವಾಮಿ ಅವರ ತಂದೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

‘ಈ ವಿಡಿಯೋ ನೋಡಿ ಬಹಳ ಅಚ್ಚರಿಯಾಯಿತು. ಆರೋಪಿ ದರ್ಶನ್​ ಸಿಗರೇಟ್​ ಸೇದುತ್ತಿರುವುದು ನೋಡಿದ್ರೆ ಆತನಿಗೆ ತಾನು ತಪ್ಪು ಮಾಡಿದ್ದೀನಿ ಎಂಬ ಅರಿವೇ ಇಲ್ಲದಂತೆ ಭಾಸವಾಗುತ್ತಿದೆ. ಜೈಲು ಜೈಲಾಗಿದ್ದರೆ ಒಳ್ಳೆಯದು. ರೆಸಾರ್ಟ್​ ಆಗುವುದು ಬೇಡ. ಈ ವ್ಯವಸ್ಥೆ ಸರಿಯಲ್ಲ. ಇದನ್ನೆಲ್ಲಾ ನೋಡಿದ್ರೆ ಕೇಸ್​ನ ಸಿಬಿಐಗೆ ವಹಿಸಿದ್ದರೆ ಚೆನ್ನಾಗಿರುತ್ತಿತ್ತು ಅನಿಸಿದೆ. ರಾಜ್ಯ ಪೊಲೀಸರು ಮತ್ತು ಸರ್ಕಾರದ ಮೇಲೆ ನಂಬಿಕೆ ಇದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ’ ಎಂದು ರೇಣುಕಸ್ವಾಮಿ ತಂದೆ ಕಾಶೀನಾಥಯ್ಯ ಶಿವನಗೌಡ ಹೇಳಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!