ಹೊಸದಿಗಂತ ಡಿಜಿಟಲ್ ಡೆಸ್ಕ್:
2025-26ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಈ ಬಾರಿ ಭರ್ಜರಿ ಅನುದಾನ ಸಿಗಲಿದೆ.
ಸರ್ಕಾರದ ಕೃಷಿ ವಿತರಣೆಯು ಶೇ.15 ರಷ್ಟು ಹೆಚ್ಚಾಗಬಹುದು. ಇಬ್ಬರು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದ್ದು ನಿಜವಾಗಿದ್ದರೆ, ಕೃಷಿಗೆ ಹಣ ವಿನಿಯೋಗದಲ್ಲಿ ಅಗಿರುವ ಅತಿ ಹೆಚ್ಚಳ ಇದಾಗಿರುತ್ತದೆ.
ಕೃಷಿಯತ್ತ ಸರ್ಕಾರ ಗಮನ ಹರಿಸಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಆಹಾರ ಹಣದುಬ್ಬರ ಹೆಚ್ಚುತ್ತಿರುವಾಗ, ಆಹಾರ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರಕ್ಕೆ ಮುಖ್ಯವಾಗಿದೆ. ಇನ್ನೊಂದು ಗ್ರಾಮೀಣ ಭಾಗದಲ್ಲಿ ಆದಾಯ ಹೆಚ್ಚಳ ಮಾಡಬೇಕು ಎನ್ನುವುದಾಗಿದೆ.