ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯುತ್ ಬೇಡಿಕೆ 19 ಸಾವಿರ ಮೆಗಾವ್ಯಾಟ್ ತನಕ ಹೋಗಿದೆ. ಈವರೆಗೆ ಇಷ್ಟು ಪ್ರಮಾಣದ ಬೇಡಿಕೆ ಇರಲಿಲ್ಲ. ಹೀಗಾಗಿ 56 ಹೊಸ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ವರ್ಷ 100 ಹೊಸ ಸಬ್ ಸ್ಟೇಷನ್ ತೆರೆಯಲಾಗುತ್ತದೆ ಎಂದರು.
ಹನಿಟ್ರ್ಯಾಪ್ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಈ ವಿಷಯ ನನ್ನಲ್ಲಿ ಕೇಳಬೇಡಿ, ನನಗೂ ಇದಕ್ಕೂ ಸಂಬಂಧ ಇಲ್ಲ. ತನಿಖೆ ನಡೆಸುವುದಾಗಿ ಗೃಹ ಸಚಿವರು ಹೇಳಿದ್ದಾರೆ ಅಲ್ಲಿಯ ತನಕ ಕಾಯಬೇಕಲ್ಲವೇ ಎಂದರು.