CINE | ಈ ಸಲ ಪಕ್ಕಾ ಕಪ್ ನಮ್ದೇ, ತಲೈವಾ ಭವಿಷ್ಯವಾಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್ ಫೀವರ್ ಶುರುವಾಗಿದೆ. ಈ ಬಾರಿ ಟೀಂ ಇಂಡಿಯಾ ಹುಮ್ಮಸ್ಸು ಡಬಲ್ ಆಗಿದ್ದು, ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳೋಕೆ ಟೀಂ ಇಂಡಿಯಾ ತಯಾರಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಬಾರಿ ಭಾರತ ಗೆದ್ದು ಚಾಂಪಿಯನ್ಸ್ ಆಗ್ತಾರೆ ಎಂದು ನಟ ರಜನೀಕಾಂತ್ ಭವಿಷ್ಯ ನುಡಿದಿದ್ದಾರೆ.

ನಮ್ಮ ತಂಡಕ್ಕೆ ಸೋಲೇ ಇಲ್ಲ, ತಲೆಯೆತ್ತಿ ಮುನ್ನುಗ್ಗುತ್ತಿದೆ. ವಿಶ್ವಕಪ್ ಆರಂಭವಾಗಿ ಈಗಿನವರೆಗೂ ರೋಹಿತ್‌ಪಡೆ ಯಾರಿಗೂ ನಿರಾಸೆ ಮಾಡಿಲ್ಲ. ಈಗ ಫೈನಲ್ ಪಂದ್ಯದಲ್ಲಿ ನಮ್ಮ ಟೀಂ ಗೆದ್ದು ಬೀಗಲಿದೆ, ಈ ಸಲ ಕಪ್ ನಮ್ಮದೆ ಎಂದು ತಲೈವಾ ಭವಿಷ್ಯ ನುಡಿದಿದ್ದಾರೆ.

ನ.೧೯ರಂದು ಫೈನಲ್ ಪಂದ್ಯ ನಡೆಯಲಿದ್ದು, ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದಾರೆ. ಎಲ್ಲಾ ಪ್ಲ್ಯಾನ್‌ಗಳನ್ನೂ ಕ್ಯಾನ್ಸಲ್ ಮಾಡಿ ಮನೆಯಲ್ಲಿ ಕುಳಿತು ಮ್ಯಾಚ್ ನೋಡೋಕೆ ತಯಾರಿ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!