ಈ ಬಾರಿಯೂ ಕೂಡ ಅತಂತ್ರ ಸರ್ಕಾರ ಫಿಕ್ಸಾ? ಇದೆಂತ ಭವಿಷ್ಯ ನುಡಿದ್ರು ಕತ್ನಳ್ಳಿ ಮಠದ ಶ್ರೀ ಗುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯಪುರ ತಾಲೂಕಿನ ಕತ್ನಳ್ಳಿಯಲ್ಲಿ ಪ್ರತಿ ಯುಗಾದಿಯಲ್ಲೂ ಶ್ರೀ ಗುರು ಚಕ್ರವರ್ತಿ ಸದಾಶಿವಯೋಗೇಶ್ವರ ಜಾತ್ರೆ ನಡೆಯುತ್ತದೆ. ಜಾತ್ರೆಯ ಕೊನೆಯಲ್ಲಿ, ಒಂದು ವರ್ಷದಲ್ಲಿ ಏನಾಗುತ್ತದೆ ಎಂಬುದರ ಕುರಿತು ಭವಿಷ್ಯ ನುಡಿಯಲಾಗುತ್ತದೆ.

ಇಲ್ಲಿ ಹೇಳುವ ಭವಿಷ್ಯ ಎಂದಿಗೂ ಸುಳ್ಳಾಗುವುದಿಲ್ಲ ಎಂಬ ನಂಬಿಕೆ ಇದೆ. ಅದರಂತೆ ಈ ವರ್ಷ ಮಳೆ ಬೆಳೆ ರೋಗ ರುಜಿನಗಳು, ರಾಜಕಾರಣ ಸೇರಿದಂತೆ ಇತರೆ ವಿಚಾರಗಳ ಕುರಿತು ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಒಗಟಿನ ರೂಪದಲ್ಲಿ ಭವಿಷ್ಯ ನುಡಿದಿರುವ ಅವರು ನಾಲ್ಕು ರೇಸಿ ಬಂಡಿಗಳಿವೆ, ಅವು ಈಗ ಮುಂದೆ ಹೊರಟಿವೆ. ತ್ಯಾಗಿ, ಯೋಗಿ, ಭೋಗಿ, ರೋಗಿ ಈ ಯಾವ ಗಾಡಿಯಲ್ಲಿ ಕುಳಿತು ಸ್ಪರ್ಧೆ ಗೆಲ್ಲುತ್ತೀರಿ ನೋಡಿ ಎಂದಿದ್ದಾರೆ.

ಇದು ಕ್ರೋಧಿನಾಮ ಸಂವತ್ಸರ. ಯಾರೂ ಕೋಪಿಸಿಕೊಳ್ಳಬಾರದು. ಎಲ್ಲರೂ ಸಹಬಾಳ್ವೆಯಿಂದ ಸೌಹಾರ್ದತೆ ಮತ್ತು ನಾಗರಿಕತೆಯತ್ತ ಸಾಗಬೇಕು ಎಂದು ಭವಿಷ್ಯ ನುಡಿದರು.

ಈಗ ಮಳೆಯ ಮುನ್ಸೂಚನೆ ನೀಡಿದ ಸ್ವಾಮೀಜಿ ಸಾಕ್ಷಾತ್ ಶಿವನೇ, ಪರ್ವತದ ಹಾದಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದಾರೆ. ಪ್ರಾಣಿಗಳು ಮತ್ತು ಪಕ್ಷಿಗಳು ನೀರು ಹುಡುಕಲು ಪರಿತಪಿಸುವಂತಾಗುತ್ತದೆ. ಮುಂದಿನ ದಶಕ ವಿಭಿನ್ನವಾಗಿರುತ್ತದೆ. ಅದು ಯಾರನ್ನು ಒಗ್ಗೂಡಿಸುತ್ತದೆ, ವಿಭಜಿಸುತ್ತದೆ ಅಥವಾ ಒಂದುಗೂಡಿಸುತ್ತದೆ ಎಂದು ತಿಳಿದಿಲ್ಲ. ಇದನ್ನು ತಪ್ಪಿಸಲು, ಅವರು ದೇವರ ಸೇವೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!