Monday, October 2, 2023

Latest Posts

ಈ ಜಯ ನನ್ನದಲ್ಲ, ನಿಮ್ಮೆಲ್ಲರ ಜಯ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಭಾರಿ ನಾನು ಚುನಾವಣೆಗೆ ನಿಂತಾಗ ನೀವೆಲ್ಲರೂ ಹಗಲಿರುಳು ಹೋರಾಟದಿಂದ ನನಗೆ ಒಂದು ಐತಿಹಾಸಿಕವಾದ ಜಯ ತಂದುಕೊಟ್ಟಿದ್ದೀರಿ. ಅದಕ್ಕಾಗಿ ವರುಣ ಕ್ಷೇತ್ರದ ಎಲ್ಲಾ ಮತದಾರರಿಗೆ , ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇಂದು ವರುಣ ಕ್ಷೇತ್ರದ ಕೃತಜ್ಞತ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದರು.

ಈ ಜಯ ನನ್ನದಲ್ಲ, ನಿಮ್ಮೆಲ್ಲರ ಜಯ. ನಾನು ಈ ಮೊದಲೇ ಕೆಪಿಸಿಸಿ ಅಧ್ಯಕ್ಷರ ಕಚೇರಿಯಲ್ಲಿ ಹೇಳಿದ್ದೇನೆ. ಈ ಜಯ ರಾಜ್ಯದ ಜನರದ್ದು ಎಂದು. ಕಾಂಗ್ರೆಸ್ ಪಕ್ಷ 135+ 136 ಸ್ಥಾನ ಗೆಲ್ಲಬೇಕಾದ್ರೆ ಕರ್ನಾಟಕದ ಮತದಾರರು ಕಾಂಗ್ರೆಸ್ ಪರವಾಗಿ ತೀರ್ಪು ಕೊಟ್ಟಿದ್ದ ಕಾರಣ. ಹೀಗಾಗಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ರಾಜ್ಯದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು

ಕರ್ನಾಟಕದ ಜನ ಬಿಜೆಪಿ ಸರ್ಕಾರದಿಂದ ಬೇಸತ್ತಿದ್ರು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಲೆ ಏರಿಕೆ ಗಗನಕ್ಕೇರಿದೆ. ಯುವಕ ಯುವತಿಯರು ನೊಂದಿದ್ದಾರೆ.
ದುರಾಡಳಿತದಿಂದ ಜನರು ಬದಲಾವಣೆ ಬಯಸಿದ್ರು. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಮಾತು ಹೇಳಿದ್ದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!