Thursday, September 29, 2022

Latest Posts

ಮಳೆಗಾಲದಲ್ಲಿ ದುಸ್ಸಾಹಸಕ್ಕಿಳಿಯುವವರಿಗೆಲ್ಲ ಎಚ್ಚರಿಕೆ ಈ ವಿಡಿಯೊ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಇದನ್ನು ಬೇಜವಾಬ್ದಾರಿತನ ಎನ್ನಬೇಕೋ, ಹುಚ್ಚಾಟ ಎನ್ನಬೇಕೋ ತಿಳಿಯುತ್ತಿಲ್ಲ!. ಉಕ್ಕಿ ಹರಿಯುತ್ತಿದ್ದ ಯಲ್ಲಾಪುರ ತಾಲ್ಲೂಕಿನ ಗಂಗಾವಳಿ ನದಿಯ ಪಣಸಗುಳಿಯ ತಾತ್ಕಾಲಿಕ ಸೇತುವೆಯನ್ನು ದಾಟಲು ಹೋದ ಚಾಲಕನ ಎಡವಟ್ಟಿನಿಂದ ಲಾರಿಯೊಂದು ಕೊಚ್ಚಿಹೋಗಿದೆ.
ಲಾರಿಯಲ್ಲಿದ್ದವರು ನೀರುಪಾಲಾಗುತ್ತಿರುವುದನ್ನು ನೋಡಿದ ಅಲ್ಲಿದ್ದ ಬೋಟ್ ಚಾಲಕರು ಸಾಹಸ ಮೆರೆದು 5 ಜನರ ರಕ್ಷಣೆ ಮಾಡಿದ್ದಾರೆ. ನದಿ ನೀರು ಏರುತ್ತಿರುವ ಸಂದರ್ಭದಲ್ಲಿ, ಜೀವದ ಹಂಗನ್ನು ತೊರೆದು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತೆರಳಿ ಐವರ ಜೀವ ರಕ್ಷಿಸಿದ್ದಾರೆ. ಗುಳ್ಳಾಪುರದ ಶೇವ್ಕಾರ್ ಬೋಟ್ ಚಾಲಕರಾದ ಸಂದೇಶ, ಮದನ ಗೋವಿಂದ ಹಾಗೂ ತಂಡದವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಗುರುವಾರ ಲಾರಿಯನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್.ಡಿ.ಆರ್.ಎಫ್) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಲಾರಿಯಲ್ಲಿಯೇ ಓರ್ವ ವ್ಯಕ್ತಿ ಸಿಲುಕಿರುವ ಶಂಕೆಯಿದ್ದು, ನಾಪತ್ತೆಯಾಗಿರುವನ ಪತ್ತೆಗೆ ಶೋಧ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!