ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನವರಾದರೆ, ಇಂಥದ್ದೇ ಹಾಡಿಗೆ ಇಂಥದ್ದೇ ನೃತ್ಯ, ಹೀಗೆ ಇರಬೇಕು ಎಂದೆಲ್ಲಾ ನಿಯಮಗಳಿವೆ. ಆದರೆ ಪ್ರಾಣಿಗಳಿಗೆ ಅದ್ಯಾವ ನಿಯಮವೂ ಇಲ್ಲ…ತಾವು ಆಡಿದ್ದೇ ಆಟ ಮಾಡಿದ್ದೇ ಕೆಲಸ. ಅದರಲ್ಲೂ ಪುಟ್ಟ ಪ್ರಾಣಿಗಳ ಮಾಡುವ ಚೇಷ್ಟೆ ನಗುತರಿಸುತ್ತುವೆ. ಮುದ್ದು ಮುದ್ದಾಗಿ ಇರುತ್ತವೆ. ಅಂಥದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬರೋಬ್ಬರಿ 2ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಯೋಗ್ ಎಂಬ ವ್ಯಕ್ತಿ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿಕ್ಕ ಕ್ಲಿಪ್‌ನಲ್ಲಿ, ಮುದ್ದಾದ ಕರಡಿ ಮರಿ ನೃತ್ಯ ಮಾಡುವುದನ್ನು ಕಾಣಬಹುದು. ಪೆದ್ದು ಪೆದ್ದಾಗಿರುವ ಈ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ವಿವಿಧ ಕಮೆಂಟ್‌ಗಳ ಮೂಲಕ ಮರಿ ಕರಡಿ ನೃತ್ಯವನ್ನು ಹೊಗಳಿದ್ದಾರೆ.
Dance like nobody's watching…🐻🕺😍😅 pic.twitter.com/GoEr16oog2
— 𝕐o̴g̴ (@Yoda4ever) June 2, 2022