Friday, February 23, 2024

VIRAL | ಇದೊಂದ್ ಬಾಕಿ ಇತ್ತು, ಆಪರೇಷನ್ ಥಿಯೇಟರ್ ಒಳಗೆ ಪ್ರಿ ವೆಡ್ಡಿಂಗ್ ಫೋಟೊಶೂಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾರ್ಕ್, ಹೊಟೇಲ್, ರೆಸ್ಟೋರೆಂಟ್, ಗಿಡ, ಮರ, ಸಾಗರ, ಕೆರೆ, ಅಂಡರ್‌ವಾಟರ್ ಹೀಗೆ ಎಲ್ಲಾ ಕಡೆ ಪ್ರೀವೆಡ್ಡಿಂಗ್ ಶೂಟ್‌ಗಳು ಆಗಿದ್ದನ್ನು ಕೇಳಿರ‍್ತೀರಿ.

ಆದ್ರೆ ಚಿತ್ರದುರ್ಗದಲ್ಲಿ ಜೋಡಿಯೊಂದು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದೆ. ಜಿಲ್ಲಾಸ್ಪತ್ರೆಯ ಒಟಿಯಲ್ಲಿ ವಿಡಿಯೋ ಹಾಗೂ ಫೋಟೊಶೂಟ್ ಮಾಡಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಡಾಕ್ಟರ್ ಅಭಿಷೇಕ್ ನಡೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ಕೇಳಿಬಂದಿದೆ. ವ್ಯಕ್ತಿಗೆ ಆಪರೇಷನ್ ಮಾಡ್ತಿರುವಂತೆ ವಿಡಿಯೋ ಮಾಡಲಾಗಿದೆ. ಆಪರೇಷನ್ ಥಿಯೇಟರ್ ಸಾವು ಬದುಕಿನ ಮಧ್ಯೆ ಹೋರಾಡುವ ಸ್ಥಳ, ಇದಕ್ಕೆ ಅದರದ್ದೇ ಆದ ಗಾಂಭೀರ್ಯ ಇದೆ, ಈ ರೀತಿ ಶೂಟ್‌ಗೆ ಬಳಸಿ ಇನ್ನೊಬ್ಬರಿಗೆ ಮಾದರಿಯಾಗೋದು ಸರಿಯಲ್ಲ ಅನ್ನೋದು ಸಾರ್ವಜನಿಕರ ಅಭಿಪ್ರಾಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!