ಮೋದಿ ಮತ್ತೆ ಪ್ರಧಾನಿಯಾದರೆ ಇದು ನನ್ನ ಕೊನೆಯ ಚುನಾವಣೆ: ಖರ್ಗೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಲೋಕಸಭಾ ಚುನಾವಣೆಯ ನಂತರ ಮೋದಿ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವವೂ ಇಲ್ಲ, ಚುನಾವಣೆಯೂ ಇಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಒಡಿಶಾದ ಭುವನೇಶ್ವರದಲ್ಲಿನ ಸಮಾವೇಶದಲ್ಲಿ ಮಾತನಾಡಿದ ಖರ್ಗೆ , 2024 ರ ಸಾರ್ವತ್ರಿಕ ಚುನಾವಣೆ ದೇಶದ ಜನರಿಗೆ ಮತ ಚಲಾಯಿಸಲು ಕೊನೆಯ ಅವಕಾಶವಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಈ ಬಾರಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಇದುವೇ ನನ್ನ ಕೊನೆಯ ಚುನಾವಣೆ. ಮೋದಿ ಅಧಿಕಾರ ಮುಂದುವರಿದರೆ, ಚುನಾವಣಾ ರಾಜಕೀಯಿಂದ ದೂರ ಉಳಿಯುವುದಾಗಿ ಖರ್ಗೆ ಘೋಷಿಸಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರ ಇಡಿ ಬಳಸಿ ಎಲ್ಲರಿಗೂ ನೋಟಿಸ್ ನೀಡುತ್ತಿದೆ. ಇಡಿಗೆ ಹೆದರಿ ಹಲವು ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಪಕ್ಷಗಳನ್ನೇ ಬೆದರಿಸುತ್ತಿದ್ದಾರೆ. ಇದರಿಂದ ಇಂಡಿಯಾ ಒಕ್ಕೂಟದಿಂದ ಕೆಲ ಪಕ್ಷಗಳು ಬಿಜೆಪಿ ಜೊತೆ ಸೇರಿಕೊಳ್ಳುತ್ತಿದೆ. ಕೆಲ ಪಕ್ಷಗಳು ಮೈತ್ರಿಯಿಂದ ದೂರ ಉಳಿಯುತ್ತಿದೆ. ದೇಶದ ನಾಗರೀಕರಿಗೆ ಇದು ಕೊನೆಯ ಅವಕಾಶ. ಈ ಚುನಾವಣೆಯಲ್ಲಿ ನೀವು ಬಿಜೆಪಿ ವಿರುದ್ಧ ಮತ ಚಲಾಯಿಸಿದರೆ ದೇಶ ಉಳಿಯಲಿದೆ. ಇಲ್ಲದಿದ್ದರೆ ಮುಂದೆ ನಿಮಗೆ ಮತ ಚಲಾಯಿಸುವ ಅವಕಾಶವೂ ಇರವುದಿಲ್ಲ. ಬಿಜೆಪಿ ತನ್ನ ಸರ್ವಾಧಿಕಾರದಿಂದ ಎಲ್ಲಾ ಅವಕಾಶಗಳನ್ನು ಕಸಿದುಕೊಳ್ಳಲಿದೆ ಎಂದು ಖರ್ಗೆ ಎಚ್ಚರಿಸಿದ್ದಾರೆ.

ಅವರು ಜನರನ್ನು ಬೆದರಿಸುತ್ತಿದ್ದಾರೆ… ಭಯದಿಂದಾಗಿ, ಕೆಲವರು ಪಕ್ಷವನ್ನು ತೊರೆಯುತ್ತಿದ್ದಾರೆ ಮತ್ತು ಕೆಲವರು ಮೈತ್ರಿಯನ್ನು ತೊರೆಯುತ್ತಿದ್ದಾರೆ… ಮತ ಚಲಾಯಿಸಲು ಇದು ನಿಮಗೆ ಕೊನೆಯ ಅವಕಾಶ. ಇದರ ನಂತರ, ಯಾವುದೇ ಮತದಾನ ಇರುವುದಿಲ್ಲ” ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ದೇಶವನ್ನು ಮೊಹಬ್ಬತ್‌ ಕಿ ದುಕಾನ್ ಮೂಲಕ ಒಂದುಗೂಡಿಸಲು ಬಯಸುತ್ತಾರೆ, ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ‘ನಫ್ರತ್ ಕಿ ದುಕಾನ್’ ತೆರೆದಿವೆ. ಬಿಜೆಪಿ ಹಾಗೂ RSS ಭಾರತವನ್ನು ಒಡೆದು ಆಳುತ್ತಿದೆ ಎಂದಿದ್ದಾರೆ.ಈ ಕಾರಣದಿಂದಾಗಿಯೇ ನೀವು ಜಾಗರೂಕರಾಗಿರಬೇಕುಎಂದು ಖರ್ಗೆ ಹೇಳಿದರು.

ಬಿಜೆಡಿ ಮುಖ್ಯಸ್ಥ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಧಾನಿ ಮೋದಿ ಅವರೊಂದಿಗಿನ ಸ್ನೇಹದ ಬಗ್ಗೆಯೂ ಅವರು ವಾಗ್ದಾಳಿ ನಡೆಸಿದರು.ನರೇಂದ್ರ ಮೋದಿ ಅವರೊಂದಿಗಿನ ಸ್ನೇಹದಿಂದ ನವೀನ್ ಪಟ್ನಾಯಕ್ ಏನು ಪಡೆದರು? ಡಬಲ್ ಎಂಜಿನ್ ಕೆಲವೊಮ್ಮೆ ವಿಫಲವಾಗುತ್ತದೆ. ಮತ್ತು ಡಬಲ್ ಎಂಜಿನ್ ಸರಿಯಾಗಿ ಕೆಲಸ ಮಾಡದಿದ್ದಾಗ, ಮೊದಲ ಎಂಜಿನ್ ಸಹ ವಿಫಲವಾಗುತ್ತದೆ” ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!