ಉಪ್ಪು ತಿಂದವ ನೀರು ಕುಡಿಯಲೇಬೇಕು: ದರ್ಶನ್ ಪ್ರಕರಣಕ್ಕೆ ಸಚಿವ ಜಮೀರ್ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಈ ವೇಳೆ ದರ್ಶನ್ ರಕ್ಷಣೆಗೆ ಕೆಲ ಕಾಂಗ್ರೆಸ್ ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹಮದ್ ಖಾನ್ , ದರ್ಶನ್ ಪ್ರಕರಣದಲ್ಲಿ ಯಾರೂ ಪೊಲೀಸರ ಮೇಲೆ ಒತ್ತಡ ಹಾಕಿಲ್ಲ. ನಾನೇ ಪೊಲೀಸರ ಮೇಲೆ ಒತ್ತಡ ಹಾಕಿದ್ದೇನೆಂದು ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ, ನಾನು ಒತ್ತಡ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ‘ದರ್ಶನ್ ಹಾಗೂ ನಾನು ಒಳ್ಳೆಯ ಸ್ನೇಹಿತರು ಆ ವಿಚಾರದಲ್ಲಿ ಇಲ್ಲ ಎಂದು ಹೇಳಲ್ಲ. ಇಂಥ ಘಟನೆ ಮಾಡಿದಾಗ ಯಾರು ಅವರ ಪರ ನಿಲ್ಲುತ್ತಾರೆ ಎಂದು ಪ್ರಶ್ನೆ ಮಾಡಿದರು. ತಪ್ಪು ತಪ್ಪೇ, ಉಪ್ಪು ತಿಂದವ ನೀರು ಕುಡಿಯಲೇಬೇಕು. ತಪ್ಪು ಯಾರೇ ಮಾಡಲಿ, ದರ್ಶನ್ ಇದ್ದರೂ ಅಷ್ಟೇ, ಇನ್ನೊಬ್ಬರು ಇದ್ದರಷ್ಟೇ ಶಿಕ್ಷೆ ಆಗಲೇಬೇಕು. ನನ್ನ ಹೆಸರನ್ನು ಮಾಧ್ಯಮದಲ್ಲಿ ನೆರವಾಗಿ ಹೇಳಿಲ್ಲ, ಪರೋಕ್ಷವಾಗಿ ಹೇಳಿದ್ದಾರೆ ಎಂದರು.

ದರ್ಶನ್​ ವಿಚಾರದಲ್ಲಿ ಆತರ ಯಾವುದು ಇಲ್ಲ, ಕಾನೂನಿನ ಚೌಕಟ್ಟಿಯಲ್ಲಿ ತನಿಖೆ ನಡೆಯುತ್ತಿದೆ. ಅವರನ್ನ ಜೈಲಿಗೆ ಕಳಿಸಲಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಮುಂದಿನ ತೀರ್ಮಾನ ಮಾಡುತ್ತದೆ. ದರ್ಶನ್ ಪರ ಕೈ ಶಾಸಕ ಗೋವಿಂದಗೌಡ ಮಾತನಾಡಿದ ವಿಚಾರ, ಅವರವರ ಅಭಿಪ್ರಾಯವದು, ಅವರ ಅಭಿಪ್ರಾಯ ಅವರು ಹೇಳಿದ್ದಾರೆ, ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!