ಹೊಸದಿಗಂತ ವರದಿ,ವಿಜಯಪುರ:
ನನಗೆ ತೊಂದರೆ ಕೊಟ್ಟವರು, ಸದ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಕುರಿತು ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಯರ‍್ಯಾರಾರು ತೊಂದರೆ ಕೊಟ್ಟಿದ್ದಾರೆ, ಅವರು ಮುಂದೆ ಅನುಭವಿಸುತ್ತಾರೆ. ಇನ್ನು ಮುಂದೇನು ಕೂಡ ತೊಂದರೆ ಅನುಭವಿಸುತ್ತಾರೆ ಎಂದರು.
ನನಗೆ ತೊಂದರೆ ಕೊಟ್ಟವರ ಹೆಸರು ಹೇಳಿದ್ದರೆ, ಬ್ರೇಕಿಂಗ್ ನ್ಯೂಸ್ ಇರಲ್ಲ. ನಿಧಾನವಾಗಿ ಎಲ್ಲವೂ ಗೊತ್ತಾಗುತ್ತದೆ. ನನ್ನ ಪ್ರಕರಣದಲ್ಲಿ ನಾನು ತಕ್ಷಣವೇ ರಾಜೀನಾಮೆ ನೀಡಿದೆ. ಅದಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು ಎಂದರು.
ತನಿಖೆ ಬಳಿಕ ಸತ್ಯಾಸತ್ಯತೆ ಬಳಿಕ ಮತ್ತೆ ಸೇರಿಸಿಕೊಳ್ಳಬಹುದು. ರಾಜಕಾರಣದಲ್ಲಿ ಮಠ, ಮಂದಿರ, ರೈತರಿಗೆ ಅನ್ಯಾಯವಾದರೆ ನಾವು ಏನನ್ನೂ ಮಾಡಬೇಕು, ಅದನ್ನು ಮಾಡುತ್ತೇವೆ ಎಂದರು.