ಸಂಪ್‌ ತೆಗೆದು ನೋಡಿದವರಿಗೆ ಶಾಕ್‌, ಅದರೊಳಗಿತ್ತು ಬರೋಬ್ಬರಿ 69 ನೀರು ಹಾವಿನ ಮರಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಶಿವಮೊಗ್ಗದ ವಿನೋಬನಗರ ನಿವಾಸಿಯೊಬ್ಬರ ಮನೆಯ ಸೊಂಪ್‌ನಲ್ಲಿ ಬರೋಬ್ಬರಿ 69 ಹಾವಿನ ಮರಿಗಳು ಪತ್ತೆಯಾಗಿವೆ.

ಸಂಪ್​ನ ಬಳಿ ಮೊದಲು ಒಂದು ಹಾವಿನ ಮರಿ ಕಂಡುಬಂದಿತ್ತು. ಈಶ್ವರಯ್ಯನವರು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದು ಕಿರಣ್​ ಪರಿಶೀಲಿಸಿದ್ದಾರೆ. ಸಂಪ್​ನ​ ಮುಚ್ಚಳ ತೆಗೆದು ನೋಡಿದಾಗ ಅಲ್ಲಿ ಒಂದೇ ಕಡೆ ಹಲವು ಮರಿಗಳು ಪತ್ತೆಯಾಗಿವೆ.ಬಳಿಕ ಸಂಪ್​ನಿಂದ ಸುಮಾರು 63 ಹಾವಿನ ಮರಿಗಳನ್ನು ಮೇಲಕ್ಕೆ ತೆಗೆಯಲಾಯಿತು.‌ ಇದಾದ ಮರುದಿನವೂ 6 ಹಾವಿನ ಮರಿಗಳನ್ನು ತೆಗೆಯಲಾಗಿದೆ. ಇವು ನೀರು ಹಾವುಗಳಾಗಿದ್ದು, ವಿಷ ರಹಿತವಾಗಿವೆ. ತಾಯಿ ಹಾವು ಸ್ಥಳದಲ್ಲಿ ಕಂಡಿಲ್ಲ.‌

ಸಂಪ್​ನಿಂದ ತೆಗೆದ ಹಾವಿನ ಮರಿಗಳಲ್ಲಿ ವಿಶೇಷವಾಗಿ ಒಂದು ಹಳದಿ ಬಣ್ಣದ ಹಾವಿನ ಮರಿಯೂ ಸಿಕ್ಕಿದೆ. ಇದಕ್ಕೆ ನೈಸರ್ಗಿಕ ಬಣ್ಣ ಬಾರದ ಕಾರಣ ಹಳದಿ ಬಣ್ಣದಲ್ಲಿದೆ. ಅಲ್ಬಿನೋ ಕೋಬ್ರಾ ಎಂದು ಸಾಮಾನ್ಯವಾಗಿ ಇದನ್ನು ಕರೆಯುತ್ತಾರೆ. ತನ್ನ ಚರ್ಮದ ಸಮಸ್ಯೆಯಿಂದಾಗಿ ಈ ಬಣ್ಣದಲ್ಲಿರುತ್ತದೆ. ನೀರು ಹಾವಿನಲ್ಲಿ 6 ಜಾತಿಗಳಿವೆ.‌ ನೀರು ಹಾವು ನೀರಿನ ಸೆಲೆ ಇರುವ ಕಡೆಯಲ್ಲಿ ಮಾತ್ರ ಜೀವಿಸುತ್ತದೆ ಎಂಬುದು ಗಮನಾರ್ಹ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!