ಭಾರತ ಕಂಡ್ರೆ ಉರ್ಕೋಳೋರು ಒಬ್ರಾ, ಇಬ್ರಾ.. ಪಾಕ್ ಗೆ ಬೆಂಬಲ ಕೊಡೋರೆಲ್ಲಾ ನಮ್ಗೆ ಶತ್ರುಗಳೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಆಪರೇಷನ್ ಸಿಂದೂರ​’ ಮೂಲಕ ಭಾರತವು ಪಾಕಿಸ್ತಾನದಲ್ಲಿ ಅಡಗಿ ಕುಳಿತ್ತಿದ್ದ ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ವಾಯುದಾಳಿ ನಡೆಸುವ ಮೂಲಕ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ.

ಇದೀಗ ಈ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಪಾಕ್ ನಡುವಿನ ಸಂಘರ್ಷದ ಬಗ್ಗೆ ಹಲವು ಚರ್ಚೆಗಳು ಶುರುವಾಗಿವೆ.

ಎರಡೂ ದೇಶಗಳ ನಡುವೆ ಯುದ್ಧ ನಡೆದರೆ ಚೀನಾ ಹೊರತುಪಡಿಸಿ ಬೇರೆ ಯಾವ ದೇಶಗಳು ಪಾಕಿಸ್ತಾನವನ್ನು ಬೆಂಬಲಿಸುತ್ತವೆ ಅನ್ನೋ ಡೀಟೇಲ್ಸ್ ಇಲ್ಲಿದೆ:

ಚೀನಾ:

ಮತ್ತೊಮ್ಮೆ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ. ಭಾರತದ ವಾಯುದಾಳಿಗೆ ಚೀನಾ ಕಳವಳ ವ್ಯಕ್ತಪಡಿಸಿದೆ.

ಟರ್ಕಿ:

ವೈಮಾನಿಕ ದಾಳಿಯ ನಂತರ ಪಾಕಿಸ್ತಾನವನ್ನು ಬೆಂಬಲಿಸಿದೆ ಟರ್ಕಿಶ್ ರಾಯಭಾರಿ, ವೈಮಾನಿಕ ದಾಳಿಯಿಂದ ಪಾಕಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆ ಆಗಿದೆ ಎಂದು ಹೇಳಿದೆ.

ಅಜೆರ್ಬೈಜಾನ್:

ಪಾಕ್ ಮೇಲಿನ ದಾಳಿಯನ್ನು ಖಂಡಿಸೋದಾಗಿ ಅಜೆರ್ಬೈಜಾನ್ ವಿದೇಶಾಂಗ ಸಚಿವಾಲಯ ಹೇಳಿದೆ. ಒಂದು ವೇಳೆ ಭಾರತ ಮತ್ತು ಪಾಕ್ ಮಧ್ಯೆ ಯುದ್ಧ ನಡೆದರೆ ಈ ಎಲ್ಲಾ ದೇಶಗಳು ಭಿಕಾರಿಸ್ತಾನ್‌ ಗೆ ಬೆಂಬಲ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!