ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಳ್ಳು ಹಂದಿ ಶಿಕಾರಿಗೆ ಹೊರ ಇಬ್ಬರು ಸುರಂಗದೊಳಗೆ ತೆರಳಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆಯ ಬಾಳೂರಿನ ಮಾಳಿಗನಾಡು ಎಂಬಲ್ಲಿ ಇಬ್ಬರು ಕೂಲಿ ಕಾರ್ಮಿಕರು ಸುರಂಗದೊಳಗೆ ನುಗ್ಗಿ ಹಂದಿ ಶಿಕಾರಿಗೆ ಹೊರಟಿದ್ದರು.
ಆನೆಗುಂಡಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ವಿಜಯ್ ಹಾಗೂ ಶರತ್ ಮೃತರು. ಕಾಳು ಮೆಣಸು ಕುಯ್ಯಲು ಬಂದಿದ್ದ ಕಾರ್ಮಿಕರು ಮುಳ್ಳು ಹಂದಿ ನೋಡಿ ಶಿಕಾರಿಗೆ ಹೋಗಿದ್ದಾರೆ. ಗುಡ್ಡದಲ್ಲಿ ಹಂದಿ ಸುರಂಗದೊಳಗೆ ಹೋಗಿದೆ. ಸುರಂಗದೊಳಗೆ ಹೊಗೆ ಹಾಕಿದ ನಂತರ ಒಳಗೆ ಹೋಗಿದ್ದಾರೆ. ಹೊಗೆಯ ಪರಿಣಾಮ ಉಸಿರಾಡಲು ಆಗದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ.