Saturday, September 23, 2023

Latest Posts

ಅಮೆರಿಕದ ಕೊಲೊರಾಡೋದಲ್ಲಿ ಕಾಳ್ಗಿಚ್ಚು: ಸಾವಿರಾರು ಮನೆಗಳು ಬೆಂಕಿಗಾಹುತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದ ಕೊಲೊರಾಡೋದಲ್ಲಿ ಕಾಳ್ಗಿಚ್ಚು ಉಂಟಾಗಿದ್ದು, ಸಾವಿರಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿದ್ದು, ಮೂವರು ನಾಪತ್ತೆಯಾಗಿರುವ ಘಟನೆ ನಡೆದಿದೆ.

Tens of thousands flee as Colorado fires burn hundreds of homes | Weather  News | Al Jazeeraರಾಜ್ಯದ ಅತಿದೊಡ್ಡ ನಗರ ಡೆನ್ವರ್‌ ನ ಹೊರಭಾಗದಲ್ಲಿನ ಸುಪೀರಿಯರ್‌ ಮತ್ತೆ ಲೂಯಿಸ್‌ ವಿಲ್ಲೆ ನಗರಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾವಿರಕ್ಕೂ ಹೆಚ್ಚು ಮನೆ ನಾಶವಾಗಿವೆ. ಅನೇಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಕಾಳ್ಗಿಚ್ಚಿನಲ್ಲಿ ಸಿಲುಕಿ ಗಾಯಗೊಂಡಿದ್ದ 6 ಜನರನ್ನು ಯುಎಸ್‌ ಹೆಲ್ತ್‌ ಬ್ರೂಮ್‌ ಫೀಲ್ಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

colorado: Hundreds of homes feared lost in Colorado wildfires - Times of  India

ಕೊಲೊರಾಡೋ ಸುತ್ತಮುತ್ತಲಿನ ಪ್ರದೇಶಗಳು ಬೆಂಕಿಯ ಕೆನ್ನಾಲಿಗೆಯಿಂದ ಆವರಿಸಿಕೊಂಡಿವೆ. ಸುಮಾರು 160 ಕಿ.ಮೀ ನಷ್ಟು ದೂರ ಬೆಂಕಿ ಆವರಿಸಿಕೊಂಡಿದೆ. ಈ ಹಿನ್ನೆಲೆ ಹೆದ್ದಾರಿ 36 ಅನ್ನು ವಂದ್‌ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!