ಮೋಹನ್ ಭಾಗವತ್ ಭೇಟಿ ಬೆನ್ನಲ್ಲೇ ಬಂತು ಬೆದರಿಕೆ: ಇಮಾಮ್ ಉಮರ್ ಅಹ್ಮದ್​ ಇಲ್ಯಾಸಿಗೆ ವೈ+ ಭದ್ರತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನುಭೇಟಿಯಾಗಿದ್ದ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರಿಗೆ ಹಲವು ಬೆದರಿಕೆಗಳು ಬರುತ್ತಿದ್ದು, ಈ ಹಿನ್ನಲೆ ವೈ ಪ್ಲಸ್​ (ವೈ +) ಶ್ರೇಣಿ ಭದ್ರತೆಯನ್ನು ನೀಡಲಾಗಿದೆ.

ಸೆಪ್ಟೆಂಬರ್ 22ರಂದು ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಆಹ್ವಾನದ ಮೇರೆ ಉತ್ತರ ದೆಹಲಿಯ ಮದರಸಾ ತಜ್ವೀದುಲ್ ಕುರಾನ್‌ಗೆ ಮೋಹನ್​ ಭಾಗವತ್​ ಭೇಟಿ ನೀಡಿದ್ದರು. ಈ ಭೇಟಿ ಬಳಿಕ ಭಾಗವತ್ ಅವರನ್ನು ರಾಷ್ಟ್ರಪಿತ ಮತ್ತು ರಾಷ್ಟ್ರಋಷಿ ಎಂದು ಇಲ್ಯಾಸಿ ಬಣ್ಣಿಸಿದ್ದರು. ಈ ರೀತಿ ಕರೆದ ಬಳಿಕ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಇಮಾಮ್ ಉಮರ್ ಅಹ್ಮದ್ ತಿಳಿಸಿದ್ದಾರೆ.

ಇಂಗ್ಲೆಂಡ್​ನಂತೆ ದುಬೈ ಮತ್ತು ಕೋಲ್ಕತ್ತಾದಿಂದ ದೂರವಾಣಿ ಮೂಲಕ ಬೆದರಿಕೆ ಕರೆಗಳು ಬಂದಿವೆ ಎಂದು ತಿಲಕ್ ಲೇನ್ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು. ಜೊತೆಗೆ ಈ ಬಗ್ಗೆ ಗೃಹ ಸಚಿವಾಲಯಕ್ಕೂ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಸರ್ಕಾರ ವೈ ಪ್ಲಸ್​ ಶ್ರೇಣಿಯ ಭದ್ರತೆ ನೀಡಿದೆ.

ಗೃಹ ವ್ಯವಹಾರಗಳ ಸಚಿವಾಲಯವು ನೀಡಿರುವ ವೈ ಪ್ಲಸ್ ಶ್ರೇಣಿ ಭದ್ರತೆಗಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಇಮಾಮ್​ ಉಮರ್ ಅಹ್ಮದ್ ಇಲ್ಯಾಸಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!