ಮಗಳ ಫೋಟೋ ಕಳುಹಿಸಿ ಬೆದರಿಕೆ ಹಾಕ್ತಿದ್ದಾರೆ: ಶಾರುಖ್ ಅಭಿಮಾನಿಗಳ ವಿರುದ್ಧ ವಿವೇಕ್ ಆಗ್ನಿಹೋತ್ರಿ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ ಚರ್ಚೆ ಎಲ್ಲೆಡೆ ನಡೆಯುತ್ತಿದ್ದು, ಅದ್ರಲ್ಲೂ ಸಿನಿಮಾದ ಬೇಷರಂ ರಂಗ್ ಹಾಡಿನ ಬಳಿಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಣಿಸಿಕೊಂಡಿದ್ದ ಬೇಷರಂ ರಂಗ್ ಹಾಡು ವಿವಾದ ಸುಳಿಯಲ್ಲಿ ಸಿಲುಕಿದೆ. ಈ ಬಗ್ಗೆ ಚರ್ಚೆ ಇನ್ನೂ ನಿಂತಿಲ್ಲ. ಅನೇಕರು ಬೇಷರಂ ರಂಗ್ ಹಾಡಿನ ವಿರುದ್ಧ ಕಿಡಿ ಕಾರಿದ್ದರು. ಬಾಲಿವುಡ್ ನಿರ್ದೇಶಕ ವಿವೇಕ್ ಆಗ್ನಿಹೋತ್ರಿ ಕೂಡ ಟೀಕಿಸಿದ್ದರು.

ಇದೀಗ ಹಾಡಿನ ವಿರುದ್ಧ ಆಕ್ರೋಶ ಹೊರ ಹಾಕಿದ ನಂತರ ಬೆದರಿಕೆ ಕರೆಗಲು ಬರ್ತಿವೆ ಎಂದು ಅಗ್ನಿಹೋತ್ರಿ ಆರೋಪ ಮಾಡಿದ್ದಾರೆ.
ಅಗ್ನಿಹೋತ್ರಿ ಪಠಾಣ್ ವಿರುದ್ಧ ಕಾಮೆಂಟ್ ಮಾಡುತ್ತಿದ್ದಂತೆ ಅವರ ಮಗಳು ಕೇಸರಿ ಬಿಕಿನಿ ಧರಿಸಿ ಬೀಚ್ ನಲ್ಲಿ ಕುಳಿತು ಪೋಸ್ ನೀಡಿದ್ದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಅಗ್ನಿಹೋತ್ರಿ ಮಗಳ ಬಿಕಿನಿ ಫೋಟೋ ಶೇರ್ ಮಾಡಿ ಕಿಡಿ ಕಾರುತ್ತಿದ್ದಾರೆ. ‘ನಿಮ್ಮ ಮಗಳೇ ಬಿಕಿನಿ ಧರಿಸಿ ಶೋ ಮಾಡ್ತಿದ್ದಾರೆ ಶಾರುಖ್‌ನಾ ಯಾಕೆ ಟಾರ್ಗೆಟ್ ಮಾಡ್ತಿದ್ದೀರಾ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಈ ಬಗ್ಗೆ ಅಗ್ನಿ ಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಶಾರುಖ್ ಖಾನ್ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶಾರುಖ್ ವಿರುದ್ಧ ಮಾಡಿದ್ದ ಟ್ವೀಟ್ ಡಿಲೀಟ್ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಸ್ಕ್ರೀನ್ ಶಾಟ್ ಶೇರ್ ಮಾಡಿ, ‘ಬಾದ್‌ಶಾ ಹೇಳಿದ್ದು ಸರಿ. ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಇದೆ. ಆದರೆ ನಾವು ಸಕಾರಾತ್ಮಕವಾಗಿದ್ದೇವೆ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!