ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತೂರು-ಮೂರ್ನಾಡು ಗ್ರಾಮದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ ಸರಬರಾಜು ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕನ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ರಾಜ್ಯದ ಧರಾಂಗ್ ಜಿಲ್ಲೆಯ ಅಜೀಮ್ ಅಲಿ (19) ಸೈಫುಲ್ ಇಸ್ಲಾಂ (31) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕ ಬಂಧನಕ್ಕೊಳಗಾದವರಾಗಿದ್್ಉ, ಆರೋಪಿಗಳಿಂದ 1 ಕೆ.ಜಿ 420 ಗ್ರಾಂ ಗಾಂಜಾ, ರೂ. 850 ಹಾಗೂ ನಗದು ಹಾಗೂ ಒಂದು ಗಾಂಜಾ ಸೇದುವ ಕೊಳವೆಯನ್ನು ವಶಪಡಿಸಿಕೊಳ್ಳಲಾಗಿದೆ.
ಕಾಂತೂರು-ಮೂರ್ನಾಡು ಗ್ರಾಮದ ನಿವಾಸಿ ಸಂದೇಶ್ ಎಂಬವರ ತೋಟದ ಲೈನ್‌ಮನೆಯಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮಾರಾಟ/ಸರಬರಾಜು ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಉಮರ್, ಶಾರ್ಜೀಲ್ ಗೆ ಜಾಮೀನು ನಿರಾಕರಣೆ: ‘ಸುಪ್ರೀಂ’ ತೀರ್ಪಿನ ವಿರುದ್ಧ ವಿಪಕ್ಷ ನಾಯಕರು ಸಿಡಿಮಿಡಿ!
ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್.ಪಿ.ಎ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್.ಹೆಚ್.ಎ, ಪಿಎಸ್ಐ ಜವರೇಗೌಡ, ಎಎಸ್‌ಐ ವಸಂತ, ಸಿಬ್ಬಂದಿಗಳಾದ ಮಹೇಶ್, ಲೋಕೇಶ್, ಯೋಗೇಶ್, ನಿರಂಜನ್, ಡಿಸಿಆರ್ ಬಿ ತಾಂತ್ರಿಕ ವಿಭಾಗದ ಪ್ರವೀಣ್, ಚೇತನ್, ಮಡಿಕೇರಿ ಗ್ರಾಮಾಂತರ ಠಾಣೆಯ ಈರಪ್ಪ ವಠಾರ, ತಿಮ್ಮಪ್ಪ.ಎನ್, ಚೇತನ್, ಪಿಸಿ, ಪೂರ್ಣಿಮಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್ ಪಿ ಕು. ಬಿಂದು ಮಣಿ.ಆರ್.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಅವರುಗಳು ಶ್ಲಾಘಿಸಿದ್ದಾರೆ.

