Tuesday, June 28, 2022

Latest Posts

ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ: ಮೂವರ ಬಂಧನ

ಹೊಸದಿಗಂತ ವರದಿ,ಅಂಕೋಲಾ:

ತಾಲೂಕಿನ ಹುಲಿದೇವರವಾಡದ ಎ.ಪಿ.ಎಂ.ಸಿ ಬಳಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮಾದಕ ಗಾಂಜಾ ಇಟ್ಟುಕೊಂಡು ನಿಂತಿರುವ ಸಂದರ್ಭದಲ್ಲಿ ಅಂಕೋಲಾ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಕಾಕರಮಠ ನಿವಾಸಿ ಅಪ್ತಾಬ್ ಅಲ್ತಾಪ್ ಶೇಖ್ (30) ಅಜ್ಜಿಕಟ್ಟಾ ನಿವಾಸಿ ಅಲ್ತಾಪ್ ಇಕ್ಬಾಲ್ ಶೇಖ್ (32) ತೆಂಕಣಕೇರಿ ನಿವಾಸಿ ಆದೇಶ ಮಹಾಬಲೇಶ್ವರ ನಾಯ್ಕ (28) ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 377 ಗ್ರಾಂ ತೂಕದ ಸುಮಾರು 6600 ರೂಪಾಯಿ ಮೌಲ್ಯದ ಮಾದಕ ಗಾಂಜಾ ಪುಡಿ ವಶಪಡಿಸಿಕೊಂಡಿದ್ದಾರೆ.
ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್. ಐ ಮಹಾಂತೇಶ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss