ದಿಗಂತ ವರದಿ ಅಂಕೋಲಾ:
ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಕರ್ನಾಟಕ ರಾಜ್ಯದ ವಿವಿಧ ಬ್ಯಾಂಡುಗಳ ಮದ್ಯ ಸಾಗಿಸುತ್ತಿದ್ದ ಮೂವರನ್ನು ಅಂಕೋಲಾ ಪೋಲಿಸರು ಬಂಧಿಸಿದ್ದಾರೆ.
ಅಂಕೋಲಾ ಹಟ್ಟಿಕೇರಿ ಸಕಲಬೇಣ ನಿವಾಸಿಗಳಾದ ವಿನೋದ ಗೇನು ನಾಯ್ಕ (49), ಸಂತೋಷ ಗೇನು ನಾಯ್ಕ (41) ವಾಸುದೇವ ಗೇನು ನಾಯ್ಕ (51) ಬಂಧಿತ ಆರೋಪಿಗಳಾಗಿದ್ದು ಇವರಿಂದ 5500 ರೂಪಾಯಿ ನಗದು ಸೇರಿದಂತೆ ಅಕ್ರಮವಾಗಿ ಸಾಗಿಸುತ್ತಿದ್ದ 650 ಎಂ.ಎಲ್ ನ ಕಿಂಗ್ ಪಿಶರ್ ಸ್ಟ್ರಾಂಗ್ 5 ಬಾಟಲಿಗಳು,
ಕಿಂಗ್ ಪಿಶರ್ ಪ್ರೀಮಿಯಂ 12 ಡಬ್ಬಿಗಳು,
ಬೇಗ್ ಪೈಪರ್ ಡಿಲಕ್ಸ ವಿಸ್ಕಿ 180 ಎಂ.ಎಲ್ ನ 20 ಪ್ಯಾಕೇಟುಗಳು, ಒರಿಜಿನಲ್ ಚಾಯ್ಸ್ ವಿಸ್ಕಿ 90 ಎಂ.ಎಲ್ ನ 50 ಪ್ಯಾಕೇಟುಗಳು, ಹೈವರ್ಡ್ಸ ಚಿಯರ್ ವಿಸ್ಕಿ 90 ಎಂ.ಎಲ್ ನ 60 ಪ್ಯಾಕೇಟುಗಳು, ಓಲ್ಡ್ ತೇವನ್ ವಿಸ್ಕಿ 180 ಎಂ.ಎಲ್ ನ 20 ಪ್ಯಾಕೇಟ್ ಸೇರಿದಂತೆ ಸುಮಾರು 10299 ಮೌಲ್ಯದ ಸರಾಯಿ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.