ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲ್ಟಿಸ್ಟಾರ್ ಕಾಸ್ಟ್ ಇರುವ ಬಹುನಿರೀಕ್ಷಿತ ಚಿತ್ರ ಗೆಹರಾಯಿಯಾ ಅಮೇಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ.
ಗೆಹರಾಯಿಯಾ ಟ್ರೇಲರ್‌ನಿಂದ ಕಥಾಹಂದರ ಬಗ್ಗೆ ತಿಳಿದಿದ್ದ ಅಭಿಮಾನಿಗಳಿಗೆ ಸಿನಿಮಾದಲ್ಲಿ ಹೆಚ್ಚು ಬೋಲ್ಡ್ ದೃಶ್ಯಗಳು ಕಾಣಿಸಿದ್ದವು.
ಆದರೆ ಸಿನಿಮಾದಲ್ಲಿ ಬರೀ ಬೋಲ್ಡ್ ದೃಶ್ಯಗಳೇ ಇಲ್ಲ, ಸಂಬಂಧಗಳ ಆಳವನ್ನು ತೋರಿಸಲಾಗಿದೆ ಎಂದು ಸಿನಿಮಾ ನೋಡಿದ ಮಂದಿ ಅಭಿಪ್ರಾಯಟ್ಟಿದ್ದಾರೆ.ನಾಲ್ಕು ಜನರ ನಡುವಿನ ಪ್ರೇಮಕಥೆ, ಪ್ರೀತಿ ಯಾರ ಮೇಲೆ ಯಾವಾಗ, ಯಾಕಾದರೂ ಹುಟ್ಟಬಹುದು. ಪ್ರೀತಿ ತಪ್ಪಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ.