Wednesday, December 10, 2025

ಪ್ರಧಾನಿ ಕುರಿತು ಅವಹೇಳನ ಪೋಸ್ಟ್: ಮಡಿಕೇರಿಲ್ಲಿ ಮೂವರ ಅರೆಸ್ಟ್

ಹೊಸದಿಗಂತ ವರದಿ,ಮಡಿಕೇರಿ:

ದೇಶದ ಪ್ರಧಾನಿಯನ್ನು ಕೆಟ್ಟ ಪದಗಳಿಂದ ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಡ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿಯ ರಾಣಿಪೇಟೆಯ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಫಹಾದ್ ಎಂ.ಇ (31), ತ್ಯಾಗರಾಜ ಕಾಲೋನಿಯ ನಿವಾಸಿ ಹುಸೇನ್ ಎಂಬವರ ಪುತ್ರ ಬಾಸಿಲ್ ಎಂ ಎಚ್ (29) ಹಾಗೂ ತ್ಯಾಗರಾಜ ಕಾಲೋನಿಯ ನಿವಾಸಿ ಮಜೀದ್ ಎಂಬವರ ಪುತ್ರ ಸಮೀರ್ ಎಂ.ಎಂ (31) ಬಂಧಿತ ಆರೋಪಿಗಳಾಗಿದ್ದಾರೆ.

ಮಡಿಕೇರಿಯ ಸ್ಪೈಸಸ್ ಅಂಗಡಿಯೊಂದರಲ್ಲಿ ಈ ಮೂವರು ಆರೋಪಿಗಳು ಮೋದಿಯವರನ್ನು ಅವಹೇಳನ ಮಾಡುವ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಈ ಅವಹೇಳನ ವಿಡಿಯೋ ನೋಡಿದ ಸಾರ್ವಜನಿಕರು ಕೂಡಲೇ ಇವರನ್ನು ಮಟ್ಟ ಹಾಕುವಂತೆ ಒತ್ತಾಯಿಸಿದ್ದರು.

ಈ ಸಂಬಂಧ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

error: Content is protected !!