ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಅಖಾಡ ಇದೀಗ ಫುಲ್ ಸೈಲೆಂಟ್ ಆಗಿದೆ. ಇಷ್ಟು ದಿನ ನಾಯಕರ ಮಾತು ಆಲಿಸಿದ ಮತದಾರ ಇಂದು ತೀರ್ಪು ನೀಡಿದ್ದಾನೆ. ಇವಿಎಂನಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದ್ದು, ಎಲ್ಲೆಡೆ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಉಪಚುನಾವಣೆ ಹೇಗಿತ್ತು? ಎಷ್ಟು ಮತ ಚಲಾವಣೆಯಾಗಿದೆ ಎಂಬುದರ ವಿವರ ಇಲ್ಲಿದೆ.
ಮೂರು ಕ್ಷೇತ್ರಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯವಾಗಿದ್ದು, ಹೆಚ್ಚಿನ ಮತದಾನವಾಗಿದೆ. ಸ್ಫರ್ಧಾತ್ಮಕ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಶೇ.88.80ರಷ್ಟು ಮತದಾನವಾಗಿದೆ. ಶಿಗ್ಗಾಂವಿಯಲ್ಲೂ ಶೇ.80.48ರಷ್ಟು ಮತದಾನವಾಗಿದೆ. ಇತ್ತ ಸಂಡೂರಿನಲ್ಲಿ ಶೇ.76.24ರಷ್ಟು ಮತದಾನವಾಗಿದೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ.
ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಲ್ಲಿಯವರೆಗೆ ರಾಜಕೀಯ ಲೆಕ್ಕಾಚಾರ ಮುಂದುವರಿಯಲಿದೆ.