ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಮನೆ ಮೈದಾನದಲ್ಲಿ ಇಂದಿನಿಂದ ಫೆ.14ರ ವರೆಗೆ ಬೆಳಿಗ್ಗೆ 08.00 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಇನ್ವೆಸ್ಟ್ ಕರ್ನಾಟಕ ಫೋರಂ ವತಿಯಿಂದ, ‘ಇನ್‌ವೆಸ್ಟ್ ಕರ್ನಾಟಕ-2025’ ಗ್ಲೋಬಲ್ ಇನ್‌ವೆಸ್ಟರ್ಸ ಮೀಟ್ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಸಚಿವರುಗಳು, ಉದ್ದಿಮೆದಾರರು, ವಿದೇಶಿ ಗಣ್ಯರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ, ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸಂಚಾರ ಮಾರ್ಪಾಡು ಮಾಡಿದ್ದಾರೆ.
ಬಸವೇಶ್ವರ ಸರ್ಕಲ್-ಒಲ್ಡ್ ಹೈಗ್ರೌಂಡ್ ಜಂಕ್ಷನ್ – ಕಲ್ಪನ – ಎಂ.ಸಿ.ಸಿ – ವಸಂತನಗರ ಅಂಡರ್ ಬ್ರಿಡ್ಜ್ ಬಲತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ನಂತರ ಕಾಲ್ನಡಿಗೆಯಲ್ಲಿ ಸೂಚನಾ ಫಲಕಗಳು ತೋರಿಸುವಂತೆ ಕಾರ್ಯಕ್ರಮದ ಸ್ಥಳ ತಲುಪಬಹುದಾಗಿದೆ.
ಪ್ಯಾಲೇಸ್ ರಸ್ತೆ, ಸರ್.ಸಿ.ವಿ.ರಾಮನ್ ರಸ್ತೆ, ನಂದಿದುರ್ಗ ರಸ್ತೆ, ಎಂ.ವಿ.ಜಯರಾಮ ರಸ್ತೆ, ಬಳ್ಳಾರಿ ರಸ್ತೆ, ತರಳಬಾಳು ರಸ್ತೆ, ಜಯಮಹಲ್ ರಸ್ತೆ, ರಮಣಮಹರ್ಷಿ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.