ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈ ಬಳಿಯ ಪಲ್ಲವರಂನಲ್ಲಿ ಕೊಳಚೆ ನೀರಿನಿಂದ ಕಲುಷಿತಗೊಂಡ ಕುಡಿಯುವ ನೀರನ್ನು ಸೇವಿಸಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಮಿಳುನಾಡು ಆರೋಗ್ಯ ಸಚಿವ ಎಂ ಸುಬ್ರಮಣಿಯನ್ ಹೇಳಿದ್ದಾರೆ.
ಮೃತರನ್ನು ತಿರುವೀತಿ (56), ಮೋಹನರಂಗಂ (42) ವರಲಕ್ಷ್ಮಿ (88) ಎಂದು ಗುರುತಿಸಲಾಗಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಬ್ರಮಣಿಯನ್, ಮೂವರ ಶವಪರೀಕ್ಷೆ ಮುಗಿದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಬಹುದು. “ಕಳೆದ 2-3 ದಿನಗಳಿಂದ ಕಾಮರಾಜನಗರ, ಪಲ್ಲಾವರಂ ಕ್ಷೇತ್ರದ ಪಲ್ಲಾವರಂ ಮತ್ತು ಅಲಂದೂರು ಕ್ಷೇತ್ರದ ಮಲಮೇಡು ಸ್ಥಳೀಯರಿಗೆ ಅತಿಸಾರ ಲಕ್ಷಣಗಳಿದ್ದು, ಕಳೆದ 2-3 ದಿನಗಳಿಂದ ಈ ದೂರುಗಳೊಂದಿಗೆ 14 ಜನರು ಚಿಕಿತ್ಸೆಗೆ ಬರುತ್ತಿದ್ದಾರೆ. ,” ಎಂದು ಹೇಳಿದ್ದಾರೆ.
ಶಂಕಿತ ಕಲುಷಿತ ಪ್ರದೇಶದಿಂದ ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.