ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲಬಾಧೆಯಿಂದಾಗಿ ಒಂದೇ ಕುಟುಂಬದ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾವೇರಿಯ ಮಂಜುನಾಥ್ ತೇಲಿ, ಸಾವಕ್ಕ ತೇಲಿ ಹಾಗೂ ರೇಣವ್ವ ಮೃತರು.
ಟ್ರ್ಯಾಕ್ಟರ್ ಸಾಲ ಕಟ್ಟು ವಿಷಯವಾಗಿ ಮನನೊಂದಿದ್ದ ಮಂಜುನಾಥ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯಗೆ ಯತ್ನಿಸಿದ್ದಾರೆ. ಈ ವೇಳೆ ಅವರ ತಾಯಿ ಸಾವಕ್ಕ ಮಗನನ್ನು ಉಳಿಸಲು ಹೋಗಿ ತಾವೂ ಮೃತಪಟ್ಟಿದ್ದಾರೆ.
ತಾಯಿ, ಮಗ ಮೃತಪಟ್ಟ ಸುದ್ದಿ ಕೇಳಿ ಮನೆಯಲ್ಲಿದ್ದ ರೇಣವ್ವ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.