HEALTH | ಬೆಳಗ್ಗೆ ಖಾಲಿ ಹೊಟ್ಟೆಗೊಂದು ಎಳನೀರು, ಏನೆಲ್ಲಾ ಚಮತ್ಕಾರ ಮಾಡತ್ತೆ ನೋಡಿ..

ಎಳನೀರು ದೇಹಕ್ಕೆ ತಂಪು ನೀಡುತ್ತದೆ. ಜ್ವರ, ಸುಸ್ತು ಇದ್ದಾಗ ಎಲ್ಲರೂ ಕುಡಿಯೋದು ಎಳನೀರು. ಇನ್ನು ಹಲವರಿಗೆ ಎಳನೀರು ಯಾವ ಸಮಯದಲ್ಲಿ ಕುರಿಬೇಕು ಅನ್ನೋ ಗೊಂದಲೆ ಇರುತ್ತೆ. ಆದರೆ ಚಿಂತಿಸಬೇಡಿ. ಎಳನೀರು ದಿನದ ಯಾವುದೇ ಹೊತ್ತಿನಲ್ಲಾದರೂ ಕುಡಿಯಬಹುದು.. ಇದರಲ್ಲಿದೆ ಸಾಕಷ್ಟು ಪ್ರಯೋಜನಗಳು..

ಜೀರ್ಣಕ್ರಿಯೆ: ಎಳನೀರು ಕುಡಿಯುವುದರಿಂದ ಜೀವಕೋಶಕ್ಕೆ ಪೋಷಕಾಂಶ ನೀಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ ಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಮಧುಮೇಹ:  ಎಳನೀರಿನಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಹಿನ್ನಲೆ ದೇಹದಲ್ಲಿನ ರಕ್ತದಲ್ಲಿರುವ ಎಲೆಕ್ಟ್ರೋಲೈಟ್ ಕಣಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ.

ಮೂಳೆಗೆ ಶಕ್ತಿ: ಎಳನೀರಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಇದು ಮೂಳೆಗಳನ್ನು ಗಟ್ಟಿ ಹಾಗೂ ಸದೃಢಗೊಳಿಸಲು ಸಹಾಯ ಮಾಡುತ್ತದೆ.

ಹೊಟ್ಟೆ ಉಬ್ಬರ: ತಂಪು ಪಾನೀಯವಾಗಿರುವ ಎಳನೀರು ಸೇವಿಸುವುದರಿಂದ ಹೊಟ್ಟೆಯುರಿ, ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

ತ್ವಚೆಗೆ ಕಾಂತಿ:
ನಮ್ಮ ತ್ವಚೆಗೆ ಬೇಕಾದ ತೇವಾಂಶ ನೀಡಿ ನಮ್ಮ ತ್ವಚೆಯ ಆರೈಕೆ ಮಾಡುತ್ತದೆ.

ತೂಕ ಇಳಿಸುವುದು: ಎಳನೀರು ದೇಹದಲ್ಲಿನ ಹೆಚ್ಚಿನ ಕೊಬ್ಬಿನ ಅಂಶವನ್ನು ತೆಗೆದು ದೇಹದ ತೂಕ ಕಡಿಮೆ ಮಾಡುವುದು.

ಕೂದಲ ಸಮಸ್ಯೆ ನಿವಾರಣೆ: ಎಳನೀರು ಕುಡಿಯುವುದರಿಂದ ನಮ್ಮ ಕೂದಲು ದಟ್ಟವಾಗಿ ಬೆಳೆಯಲು ಹಾಗೂ ಕೂದಲು ಉದರುವಿಕೆ ಕಡಿಮೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!