ಹೊಸದಿಗಂತ ವರದಿ,ಮಡಿಕೇರಿ:
ಹುಲಿ ದಾಳಿಗೆ ಮೂರು ಆಡುಗಳು ಬಲಿಯಾಗಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಬಾಳಲೆ ಗ್ರಾ.ಪಂ.ವ್ಯಾಪ್ತಿಯ ರುದ್ರಬೀಡು ಗ್ರಾಮದಲ್ಲಿ ನಡೆದಿದೆ.
ಹೊನ್ನಿಕೊಪ್ಪಲಿನ ಎಂ.ಬಿ.ಸಣ್ಣಪ್ಪ ಎಂಬವರಿಗೆ ಸೇರಿದ ಆಡುಗಳು ಇದಾಗಿದ್ದು, ರುದ್ರಬೀಡು ಗ್ರಾಮದ ತಮ್ಮ ಗದ್ದೆಯಲ್ಲಿ ಕಟ್ಟಿ ಹಾಕಿದ್ದ ಮೂರು ಆಡುಗಳ ಮೇಲೆ ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಹುಲಿ ದಾಳಿ ನಡೆಸಿದೆ.
ಕಳೆದ ಕೆಲದಿನಗಳ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ಹುಲಿ ದಾಳಿಯಿಂದ ಸಾವನ್ನಪ್ಪಿದ್ದ ಕಾಡುಹಂದಿಯ ಕಳೇಬರ ಪತ್ತೆಯಾಗಿತ್ತು.
ತಿತಿಮತಿ ಡಿ ಆರ್ ಎಫ್ ಓ ಹಾಲೇಶ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.