ಹೊಸದಿಗಂತ ವರದಿ, ನಾಗಮಂಗಲ
ಚಲಿಸುತ್ತಿದ್ದ ಕಾರು ಹೆದ್ದಾರಿ ಬದಿಯ ಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ತಿಟ್ಟನಹೊಸಹಳ್ಳಿ-ಎ.ನಾಗತಿಹಳ್ಳಿ ನಡುವೆ ಸಂಭವಿಸಿದೆ.
ಚಿಕ್ಕಮಗಳೂರಿನ ಸಿದ್ದೇಗೌಡರ ಮಗ ಚಂದ್ರೇಗೌಡ (45) ಇವರ ಪತ್ನಿ ಸರೋಜಮ್ಮ (38) ಮತ್ತು ಸಾವಿತ್ರಮ್ಮ ಎಂಬುವರೇ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಚಿಕ್ಕಮಗಳೂರಿಗೆ ಒಂದೇ ಕುಟುಂಬದ ಚಂದ್ರೇಗೌಡ, ಸರೋಜಮ್ಮ ಮತ್ತು ಸಾವಿತ್ರಮ್ಮ ಈ ಮೂವರು ತಮ್ಮ ಕಿಯಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್ ಐ ಮಾರುತಿ ಮತ್ತು ಸಿಬ್ಬಂದಿಗಳು ಚಂದ್ರೇಗೌಡ ಮತ್ತು ಸರೋಜಮ್ಮ, ಕಾರು ಬಿದ್ದಿದ್ದ ಸ್ವಲ್ಪ ದೂರದ ಪೊದೆಯಲ್ಲಿದ ಸಾವಿತ್ರಮ್ಮ ಅವರ ಮೃತದೇಹಗಳನ್ನು ಸ್ಥಳೀಯರ್ ನೆರವಿನೊಂದೊಗೆ ಸಮೀಪದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.
ತಾಲೂಕಿನ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಕಾರು: ಮೂವರು ದುರ್ಮರಣ

