ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಸಿಧಿಯಲ್ಲಿ ಟವರ್ ಸ್ಥಳಾಂತರಿಸು ವೇಳೆ ವಿದ್ಯುತ್ ಗೋಪುರ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಈ ಕುರಿತುಎಸ್ಪಿ ರವೀಂದ್ರ ವರ್ಮಾ ಮಾಹಿತಿ ನೀಡಿದ್ದು, ಗ್ರಾಮವೊಂದರಲ್ಲಿ ಟವರ್ ಬದಲಿ ಕಾರ್ಯ ನಡೆಯುತ್ತಿತ್ತು. ಗೋಪುರಗಳನ್ನು ಸ್ಥಳಾಂತರಿಸುವಾಗ, ಶಿಥಿಲಗೊಂಡ ಗೋಪುರವು ಇದ್ದಕ್ಕಿದ್ದಂತೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.