ಜೈಲಿನಲ್ಲಿದ್ರೂ ನಟ ದರ್ಶನ್​ ಮೇಲೆ ಮೂರು ಹೊಸ ಎಫ್​ಐಆರ್​ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸ್ಯಾಂಡಲ್​ವುಡ್​ ನಟ ದರ್ಶನ್​ ವಿಚಾರದಲ್ಲಿ ಪರಪ್ಪನ ಅಗ್ರಹಾರ ಜೈಲಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕೊಲೆ ಪ್ರಕರಣದಂತಹ ಗಂಭೀರ ಆರೋಪ ಹೊತ್ತು ಜೈಲು ಸೇರಿರುವ ನಟನಿಗೆ ಬಗೆಬಗೆಯ ಸೌಲಭ್ಯಗಳನ್ನು ನೀಡಲಾಗಿದೆ.

ಆ ಮೂಲಕ ಕಾನೂನಿನ ಉಲ್ಲಂಘನೆ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಎಫ್​​ಐಆರ್ ದಾಖಲಾಗಿದೆ. ಈ ಮೂರೂ ಎಫ್​ಐಆರ್​ಗಳಲ್ಲಿ ದರ್ಶನ್ ಹೆಸರು ಪ್ರಸ್ತಾಪ ಆಗಿದೆ. ಇದರಿಂದ ನಟನಿಗೆ ಸಂಕಷ್ಟ ಹೆಚ್ಚಾಗಿದೆ.

ಜೈಲಿನಲ್ಲಿ ದುಡ್ಡು ಇರುವ ವ್ಯಕ್ತಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬುದನ್ನು ಸಾಕ್ಷಿ ಎಂಬಂತೆ ದರ್ಶನ್​ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ. ಇದಕ್ಕೆ ಸಂಬಂಧಿಸಿದಂತೆ ಜೈಲು ಅಧೀಕ್ಷಕರ ದೂರು ಆಧರಿಸಿ ಮೂರು ಎಫ್​ಐಆರ್ ದಾಖಲು ಮಾಡಲಾಗಿದೆ. ಕೊಲೆ ಆರೋಪಿಗಳಾದ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ದರ್ಶನ್ ಆಪ್ತ ನಾಗರಾಜ್ ವಿರುದ್ಧ ಒಂದು ಎಫ್​​ಐಆರ್​ ಆಗಿದೆ.

ಆರೋಪಿ ದರ್ಶನ್​ಗೆ ಸಿಗರೇಟ್ ಕೊಟ್ಟಿದ್ದಕ್ಕೆ ಮತ್ತೊಂದು ಎಫ್​​ಐಆರ್ ದಾಖಲಾಗಿದೆ. ವಿಡಿಯೋ ಮಾಡಿ ವೈರಲ್ ಮಾಡಿದ್ದಕ್ಕೆ 3ನೇ ಎಫ್​​ಐಆರ್ ದಾಖಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಟ್ಟು ಮೂರು ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೂರು ಎಫ್​​ಐಆರ್​ಗಳಲ್ಲೂ ಕೂಡ ದರ್ಶನ್ ಆರೋಪಿ ಆಗಿದ್ದಾರೆ. ಇದರಿಂದ ಅವರಿಗೆ ಜಾಮೀನು ಪಡೆಯುವಲ್ಲಿ ಸಂಕಷ್ಟ ಎದುರಾಗಲಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!